ಬೆಂಗಳೂರು: ಗಂಡ ತೊರೆದಿದ್ದರಿಂದ ಪಾಪಿ ತಾಯಿ ತನ್ನ 10 ವರ್ಷದ ಮಗನನ್ನು ನೋಡಿಕೊಳ್ಳಲಾಗದೇ ರೌಡಿ ಶೀಟರ್ ಬಳಿ ಬಿಟ್ಟಿದ್ದಾಳೆ. ಆ ಕೊಲೆಗಡುಕ ರೌಡಿ ಶೀಟರ್ ಆ ಬಾಲಕನನ್ನು ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾನೆ. ಬೆಂಗಳೂರಿನ ಮೈಕೋ ಲೇಔಟ್‌ನಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ ಸಿಂಧು ಹಾಗೂ ರೌಡಿಶೀಟರ್ ಸುನೀಲ್ ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ. ಪತಿ ತೊರೆದಿದ್ದರಿಂದ ಮಗುವನ್ನು ನೋಡಿಕೊಳ್ಳಲು ಕಷ್ಟವಾಗಿದೆ ಎಂದು ಸಿಂಧು, ಮಗುವನ್ನು ರೌಡಿಶೀಟರ್ ಸುನೀಲ್ ಹತ್ತಿರ ಬಿಟ್ಟಿದ್ದಳು. ಬಾಲಕನ ಜವಾಬ್ದಾರಿ ವಹಿಸಿಕೊಂಡ ಸುನೀಲ್ ಆತನನ್ನು ಸರಿಯಾಗಿ ನೋಡಿಕೊಳ್ಳದೇ , ಪ್ರತಿ ದಿನವೂ ಚಿತ್ರಹಿಂಸೆ ನೀಡಿ ತೊಂದರೆ ಕೊಡುತ್ತಿದ್ದನು. ಫೆಬ್ರವರಿಯಲ್ಲಿ ಕೊಠಡಿಯಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ಕೊಟ್ಟಾಗ, ಬಾಲಕ ಮೃತಪಟ್ಟಿದ್ದ ಎನ್ನಲಾಗಿದೆ.
PublicNext
10/09/2021 03:34 pm