ದಾವಣಗೆರೆ: ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಮಗನೇ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದ ತಂದೆ ಮೃತಪಟ್ಟಿರುವ ಘಟನೆ ದಾವಣಗೆರೆ ತಾಲೂಕಿನ ಮಾಯಕೊಂಡ ಗ್ರಾಮದಲ್ಲಿ ನಡೆದಿದೆ.
55 ವರ್ಷದ ರಾಮಪ್ಪ ಮೃತಪಟ್ಟಿರುವ ವ್ಯಕ್ತಿ. ಸಂತೋಷ್ ಹಲ್ಲೆ ನಡೆಸಿರುವ ಮಗ. ಕೌಟುಂಬಿಕ ವಿಚಾರವಾಗಿ ರಾಮಪ್ಪ ಮನೆಯಲ್ಲಿ ಹೆಂಡತಿಯೊಂದಿಗೆ ನಿರಂತರವಾಗಿ ಜಗಳ ಮಾಡುತ್ತಿದ್ದ. ಅದರಂತೆ ಸೆಪ್ಟೆಂಬರ್ 5 ರಂದು ಕೂಡ ರಾಮಪ್ಪ ಮನೆಯಲ್ಲಿ ಹೆಂಡತಿಯೊಡನೆ ಜಗಳವಾಡಿದ್ದಾನೆ. ಜಗಳ ಮಾಡಿದ್ದರಿಂದ ತಂದೆಯ ಮೇಲೆ ಬೇಸತ್ತ ರಾಮಪ್ಪನ ಮಗ ಸಂತೋಷ್ ಈ ವೇಳೆ ತಂದೆಯ ಮೇಲೆಯೇ ಮಾರಣಾಂತಿಕ ಹಲ್ಲೆಯನ್ನ ನಡೆಸಿದ್ದಾನೆ. ಈ ವೇಳೆ ತೀವ್ರ ನೋವಿನಿಂದ ಬಳಲುತ್ತಿದ್ದ ರಾಮಪ್ಪ ಆಸ್ಪತ್ರೆಗೆ ಹೋಗದೆ ಮನೆಯಲ್ಲಿಯೇ ಉಳಿದಿದ್ದಾನೆ.
ಆದರೆ, ನೋವು ವಾಸಿಯಾಗದೇ ಮೃತಪಟ್ಟಿದ್ದಾನೆ. ಮಾಹಿತಿ ಹಿನ್ನೆಲೆಯಲ್ಲಿ ಮಾಯಕೊಂಡ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆಯನ್ನ ನಡೆಸಿದ್ದಾರೆ. ಬಳಿಕ ರಾಮಪ್ಪ ಮೃತದೇಹವನ್ನ ಪರೀಕ್ಷೆಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
10/09/2021 10:31 am