ಭೋಪಾಲ್ (ಮಧ್ಯಪ್ರದೇಶ): ಪ್ರೀತಿ ಎಂದರೆ ಅದು ಜೀವಕ್ಕೆ ಸ್ಫೂರ್ತಿಯಾಗಬೇಕು. ಜೀವ ತೆಗೆಯುವಂತಾಗಬಾರದು. ತಲೆ ಗಟ್ಟಿ ಇದೆ ಅಂತ ಬಂಡೆಗಲ್ಲಿಗೆ ಜಜ್ಜಿಕೊಳ್ಳೋಕೆ ಆಗಲ್ಲ.
ಊರಲ್ಲಿ ಇವರೊಬ್ಬರೇ ಪ್ರೇಮಿಗಳು ಬೇರೆ ಯಾರೂ ಇಲ್ಲ ಎನ್ನುವ ರೇಂಜಿಗೆ ಬೈಕ್ ರೈಡ್ ಮಾಡುತ್ತಾ ರೋಮಾನ್ಸ್ ಮಾಡ್ತಿದೆ ಈ ಜೋಡಿ. ಈ ಘಟನೆ ಮಧ್ಯ ಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ. ಆತ ಬೈಕ್ ಓಡಿಸ್ತಿದ್ದಾನೆ. ಈಕೆ ಆತನನ್ನು ತಬ್ಬಿಕೊಂಡು ಪೆಟ್ರೋಲ್ ಟ್ಯಾಂಕ್ ಮೇಲೆ ಕೂತಿದ್ದಾಳೆ. ಈ ಮೂಲಕ ಸುಪ್ತವಾಗಿರಬೇಕಿದ್ದ ಪ್ರೀತಿಯನ್ನು ಊರಿಗೆಲ್ಲ ಪ್ರದರ್ಶಿಸುತ್ತ ಹೊರಟಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ನೋಡಿದ ಸಭ್ಯಸ್ಥರು ಪಾಗಲ್ ಪ್ರೇಮಿಗಳ ಹುಚ್ಚಾಟಕ್ಕೆ ಛೀಮಾರಿ ಹಾಕುತ್ತಿದ್ದಾರೆ.
PublicNext
09/09/2021 10:27 pm