ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ನನ್ನ ಸಾವಿಗೆ ಅಪ್ಪ-ಅಮ್ಮನೇ ಕಾರಣ': ಡೆತ್ ನೋಟ್ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ

ಮಂಡ್ಯ: ನನ್ನ ಸಾವಿಗೆ ಅಪ್ಪ-ಅಮ್ಮನೇ ಕಾರಣ ಎಂದು ವ್ಯಕ್ತಿಯೋರ್ವ ಡೆತ್‌ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ನಾಗಮಂಗಲ ತಾಲೂಕಿನ ನಾಗತೀಹಳ್ಳಿ ಗ್ರಾಮದಲ್ಲಿ ನಡೆದಿದೆ.

ನಾಗತೀಹಳ್ಳಿ ಗ್ರಾಮದ ಗಿರೀಶ್(32) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. 'ನನ್ನ ಆತ್ಮಹತ್ಯೆಗೆ ಅಪ್ಪ ರಾಜು, ಅಮ್ಮ ದೇವಮಣಿ ಕಾರಣ' ಎಂದು ಗಿರೀಶ್ ಡೆತ್ ನೋಟ್ ಬರೆದಿಟ್ಟಿದ್ದಾನೆ. ಗಿರೀಶ್ ತಂದೆ ರಾಜು ನಿವೃತ್ತ ಸರ್ಕಾರಿ ಶಾಲೆ ಶಿಕ್ಷಕರಾಗಿದ್ದರೆ, ತಾಯಿ ದೇವಮಣಿ ಈಗಲೂ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ.

11 ವರ್ಷದ ಹಿಂದೆ ತ್ರಿವೇಣಿ ಜೊತೆಗೆ ಮದುವೆಯಾಗಿದ್ದೆ. ಆದರೆ ಈವರೆಗೂ ಮಕ್ಕಳಾಗಿಲ್ಲ. ಹೀಗಾಗಿ ಅಪ್ಪ-ಅಮ್ಮ ನನಗೆ ಮಾನಸಿಕ ಹಿಂಸೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಆಸ್ತಿ ಕೊಟ್ಟಿರಲಿಲ್ಲ. ಜೊತೆಗೆ ವಾಸ ಮಾಡಲು ಮನೆ ಕೂಡ ನೀಡಿರಲಿಲ್ಲ ಎಂದು ಗಿರೀಶ್ ಆರೋಪಿಸಿದ್ದಾನೆ.

ಮಗನ ಸಾವಿನ ನಂತರ ತಂದೆ-ತಾಯಿಗಳು ತಲೆ ಮರೆಸಿಕೊಂಡಿದ್ದು, ಸದ್ಯ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
PublicNext

PublicNext

09/09/2021 02:45 pm

Cinque Terre

40.32 K

Cinque Terre

1