ನವದೆಹಲಿ: ರಿಲಯನ್ಸ್ ಒಡೆಯ ಮುಕೇಶ್ ಅಂಬಾನಿ ಹಣವನ್ನು ದೋಚಲು ಮಾಸ್ಟರ್ ಪ್ಲಾನ್ ಮಾಡಿದ್ದರು ಎಂಬ ಆಘಾತಕಾರಿ ಅಂಶ ಬಯಲಾಗಿದೆ. ಪೊಲೀಸ್ ಇಲಾಖೆಯಿಂದ ವಜಾಗೊಂಡಿರುವ ಸಚಿನ್ ವಾಜೆ ಮಾಸ್ಟರ್ ಮೈಂಡ್ ಎಂಬ ಅಂಶವೂ ಬಹಿರಂಗವಾಗಿದೆ.
ಮುಕೇಶ್ ಅಂಬಾನಿ ಮನೆ ಬಳಿ ಸ್ಫೋಟಕ ತಂದು ಇಟ್ಟಿದ್ದರಲ್ಲಿ ವಜಾಗೊಂಡಿರುವ ಪೊಲೀಸ್ ಅಧಿಕಾರಿಯ ಕೈವಾಡವೂ ಇದೆ ಎಂಬುದನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ತನ್ನ ಚಾರ್ಜ್‌ಶೀಟ್‌ನಲ್ಲಿ ಹೇಳಿದೆ. ತನ್ನನ್ನು ಸೂಪರ್ ಕಾಪ್ ಎಂದು ಬಿಂಬಿಸಿಕೊಳ್ಳುವುದು, ಭಯ ಹುಟ್ಟಿಸುವುದು ಹಾಗೂ ಹಣ ವಸೂಲಿ ಮಾಡುವುದು ಈ ಕೃತ್ಯದ ಹಿಂದಿನ ಉದ್ದೇಶವಾಗಿತ್ತು ಎಂದು ಎನ್‌ಐಎ ಉಲ್ಲೇಖ ಮಾಡಿದೆ.
ಸ್ಫೋಟಕ ಹೊಂದಿರುವ ಸ್ಕಾರ್ಪಿಯೊ ಕಾರನ್ನು ಮುಕೇಶ್ ನಿವಾಸದ ಬಳಿ ಪಾರ್ಕ್ ಮಾಡಲಾಗಿತ್ತು. ಇದಕ್ಕೆ ಮುಂಬೈ ಪೊಲೀಸ್ ಇಲಾಖೆಯ ಇನೊವಾ ವಾಹನ ಕೂಡ ಬಳಕೆ ಮಾಡಿಕೊಳ್ಳಲಾಗಿತ್ತು. ಇದರ ಸಂಪೂರ್ಣ ಯೋಜನೆಯನ್ನು ವಾಜೆ ರೂಪಿಸಿದ್ದರು. ಸ್ಫೋಟಕ ಜತೆಗೆ ಬೆದರಿಕೆ ಪತ್ರವನ್ನೂ ಇಡಲಾಗಿತ್ತು. ಸ್ಕಾರ್ಪಿಯೊ ವಾಹನಕ್ಕೆ ನಕಲಿ ನಂಬರ್ ಪ್ಲೇಟ್ ಅಳವಡಿಕೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಅವರೇ ತನಿಖಾಧಿಕಾರಿಯಾಗಿದ್ದ ಕಾರಣ, ಪ್ರಾಥಮಿಕ ವರದಿಯನ್ನು ತಿರುಚಿ ತನಿಖೆಯ ದಾರಿ ತಪ್ಪಿಸಿದ್ದರು. ಹಲವು ಸಾಕ್ಷಗಳನ್ನು ನಾಶಪಡಿಸಿ, ನದಿಗೆ ಎಸೆದಿದ್ದರು.
ಉದ್ದೇಶ ಏನು?: ಭಯ ಹುಟ್ಟುಹಾಕುವುದು ಮೊದಲ ಯೋಚನೆಯಾಗಿತ್ತು. ಈ ಮೂಲಕ ಹಣಕ್ಕೆ ಬೇಡಿಕೆ ಇಡುವುದು ಮುಂದಿನ ಹೆಜ್ಜೆಯಾಗಿತ್ತು. ಈ ಚಿತ್ರಕಥೆಯಲ್ಲಿ ಐದು ಜನ ಅಧಿಕಾರದಲ್ಲಿ ಇರುವ ಆಫೀಸರ್ ಗಳು ಇಬ್ಬರು ನಿವೃತ್ತ ಆಫಿಸರ್ ಗಳು ಇದ್ದರು. ಎನ್ ಕೌಂಟರ್ ಸ್ಪೆಶಲಿಸ್ಟ್ ಪ್ರದೀಶ್ ಶರ್ಮಾ ಹೆಸರು ಕೇಳಿ ಬಂದಿದ್ದು ಜತೆಗೆ ಕ್ರಿಮಿನಲ್ ಪ್ರಕರಣದಲ್ಲಿ ಮಾಸ್ಟರ್ ಮಾಡಿದ್ದ ಐವರನ್ನು ಜತೆ ಮಾಡಿಕೊಳ್ಳಲಾಗಿತ್ತು. ಭಯ ಹುಟ್ಟಿಸಿ ಸುಲಿಗೆ ಮಾಡುವುದು ಇವರ ಉದ್ದೇಶವಾಗಿತ್ತು ದು ಚಾರ್ಜ್ ಶೀಟ್ ಹೇಳಿದೆ.
PublicNext
09/09/2021 07:53 am