ರಾಯಚೂರು: ಪ್ರೀತಿಸಿದ ಗೆಳೆತಿ ಮತ್ತೊಬ್ಬನ ಜೊತೆಗೆ ಮದುವೆ ಆಗಿದ್ದಕ್ಕೆ ಭಗ್ನ ಪ್ರೇಮಿಯೋರ್ವ ಫೇಸ್ಬುಕ್ ಲೈವ್ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಚೂರಿನಲ್ಲಿ ನಡೆದಿದೆ.
ಭೀಮೇಶ್ ನಾಯಕ (26) ನೇಣಿಗೆ ಶರಣಾದ ಯುವಕ. ಆತ ಪ್ರೀತಿಸಿದ ಯುವತಿಯನ್ನು ಬೇರೆಯವರಿಗೆ ಕೊಟ್ಟು ಮದುವೆ ಮಾಡಲಾಗಿದೆ ಎಂದು ಹೇಳಲಾಗಿದೆ. ಇದರಿಂದ ಮನನೊಂದ ಭೀಮೇಶ್ ನನ್ನ ಸಾವಿಗೆ ಪಿಎಸ್ಐ ಗಂಗಪ್ಪ ಮತ್ತು ಯುವತಿಯ ಸಂಬಂಧಿಕರು ಕಾರಣ ಎಂದು ಡೆತ್ ನೋಟ್ ಬರೆದು ತಮ್ಮ ಜಮೀನಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಭೀಮೇಶ್ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಕೆಲವು ದಿನಗಳ ಹಿಂದೆ ಆಕೆಯೊಂದಿಗೆ ಭೀಮೇಶ್ ಊರು ಬಿಟ್ಟಿದ್ದನಂತೆ. ಈ ಸಂಬಂಧ ಇಡಪನೂರು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಇಬ್ಬರೂ ಮದುವೆ ಆಗಿದ್ದೇವೆ, ಯುವತಿ ಮನೆಯವರಿಂದ ರಕ್ಷಣೆ ಕೊಡಿಸಿ ಎಂದು ಯುವಕ ಎಸ್ಪಿ ಕಚೇರಿಗೆ ಬಂದಿದ್ದನಂತೆ. ಈ ವೇಳೆ ಇಬ್ಬರನ್ನು ಠಾಣೆಗೆ ಕರೆ ತಂದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರೇಮಿಗಳನ್ನು ಬೇರೆ ಮಾಡಿದ್ದರು ಎನ್ನಲಾಗಿದೆ.
PublicNext
08/09/2021 10:13 am