ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೌರಿಬಿದನೂರು: ಇಬ್ಬರು ಗಂಡಂದಿರ ಸಾವಿನ ಬೆನ್ನಲ್ಲೇ ಪತ್ನಿಯ ನಿಗೂಢ ಸಾವು

ಚಿಕ್ಕಬಳ್ಳಾಪುರ: ಮದುವೆಯಾದ ಮೊದಲ ರಾತ್ರಿಯಂದೇ ಪ್ರೀತಿಸಿದವನ ಜೊತೆ ಪರಾರಿಯಾಗಿ ಬಳಿಕ ಇಬ್ಬರನ್ನು ಮದುವೆಯಾಗಿದ್ದ ಮಹಿಳೆ ನಿಗೂಢವಾಗಿ ಸಾವನ್ನಪ್ಪಿದ ಘಟನೆ ಗೌರಿಬಿದನೂರು ತಾಲೂಕಿನ ವಾಟದ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

ಪರ್ವೀನ್ ಮುಬಾರಕ್ (30) ಮೃತಪಟ್ಟ ಈ ನತದೃಷ್ಟ ಮಹಿಳೆ. ಗೌರಿಬಿದನೂರು ತಾಲೂಕಿನ ಮುಸಲ್ಮಾನರಹಳ್ಳಿ ನಿವಾಸಿಯಾಗಿದ್ದ ಪರ್ವೀನ್ ಹತ್ತು ವರ್ಷಗಳ ಹಿಂದೆ ಬಾಗೇಪಲ್ಲಿ ಮೂಲದ ಯುವಕನೊಂದಿಗೆ ಮದುವೆಯಾಗಿದ್ದಳು. ಆದರೆ ಫಸ್ಟ್ ನೈಟ್​ನಲ್ಲೇ ಗಂಡನನ್ನು ಬಿಟ್ಟು ಶಿವಪ್ಪ ಎಂಬ ಪ್ರಿಯಕರನ ಜೊತೆ ಆಕೆ ಓಡಿ ಹೋಗಿದ್ದಳು. ಶಿವಪ್ಪನ ಜೊತೆ 10 ವರ್ಷ ಸಂಸಾರ ಮಾಡಿದ ನಂತರ ಆತ ಅನಾರೋಗ್ಯದಿಂದ ಮೃತಪಟ್ಟಿದ್ದ. ಶಿವಪ್ಪ ಹಾಗೂ ಪರ್ವೀನ್​ಗೆ 8 ವರ್ಷದ ಓರ್ವ ಮಗನೂ ಇದ್ದಾನೆ.

ಇತ್ತೀಚೆಗೆ ಪರ್ವೀನ್ ಪಕ್ಕದ ಗ್ರಾಮ ವಾಟದ ಹೊಸಹಳ್ಳಿ ಗ್ರಾಮದ ವಿನಯ್ ಜೊತೆ ಸಂಸಾರ ಶುರು ಮಾಡಿದ್ದಳು. ಆತ ಕೂಡ ವಾರದ ಹಿಂದೆ ರಸ್ತೆ ಅಪಘಾತದಲ್ಲಿ ಲಾರಿ ಕೆಳಗೆ ಸಿಲುಕಿ ಮೃತಪಟ್ಟಿದ್ದಾನೆ. ಅದಾದ ಬಳಿಕ ಪರ್ವೀನ್ ಕೂಡ ವಾಟದಹೊಸಹಳ್ಳಿ ಗ್ರಾಮದ ಹೊರಹೊಲಯದ ಪಾಳು ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಈ ಸಂಬಂಧ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Edited By : Vijay Kumar
PublicNext

PublicNext

08/09/2021 08:23 am

Cinque Terre

48.61 K

Cinque Terre

3

ಸಂಬಂಧಿತ ಸುದ್ದಿ