ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉದ್ಯೋಗದ ಆಸೆ ತೋರಿಸಿ 6 ಜನ ಮಹಿಳೆಯನ್ನ ಮದ್ವೆಯಾದ ಭೂಪ.!

ಕೋಲ್ಕತ್ತಾ: ಉದ್ಯೋಗ ಕೊಡಿಸುವುದಾಗಿ ಆರು ಜನ ಮಹಿಳೆಯರಿಗೆ ವಂಚಿಸಿ ಮದುವೆಯಾಗಿದ್ದ ವ್ಯಕ್ತಿಯೊಬ್ಬನನ್ನು ಇಬ್ಬರು ಪತ್ನಿಯರು ರೆಡ್​​ ಹ್ಯಾಂಡಾಗಿ ಹಿಡಿದು, ಪೊಲೀಸರಿಗೆ ಒಪ್ಪಿಸಿರುವ ಘಟನೆ ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯಲ್ಲಿ ನಡೆದಿದೆ.

ಬಿಹಾರದ ವೈಶಾಲಿ ಮೂಲದ ರಾಹುಲ್ ಸಿಂಗ್ ಬಂಧಿತ ಆರೋಪಿ. ರಾಹುಲ್ ಸಿಂಗ್ ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯ ನಿಯೋರಾ ಟೀ ಗಾರ್ಡನ್​​ನಲ್ಲಿ ಆರನೇ ಪತ್ನಿಯೊಂದಿಗೆ ವಾಸವಾಗಿದ್ದ. ಆಗಸ್ಟ್ 29ರಂದು ಪಶ್ಚಿಮ ಬಂಗಾಳಕ್ಕೆ ಬಂದ ಇಬ್ಬರು ಪತ್ನಿಯರು, ರಾಹುಲ್​ ಸಿಂಗ್​ನನ್ನು ರೆಡ್​ಹ್ಯಾಂಡಾಗಿ ಹಿಡಿದಿದ್ದಾರೆ. ಇದೇ ವೇಳೆ, ರಾಹುಲ್ ಸಿಂಗ್​​ನನ್ನು ಮದುವೆಯಾಗಿರುವ ಬಗ್ಗೆ ದಾಖಲೆಗಳನ್ನು ಕೂಡ ತೋರಿಸಿದ್ದಾರೆ. ನಂತರ ಸ್ಥಳೀಯವಾಗಿರುವ ಮಲ್ ಪೊಲೀಸ್ ಠಾಣೆಗೆ ಇಬ್ಬರೂ ದೂರು ನೀಡಿದ್ದಾರೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ವಿಚಾರಣೆ ನಡೆಸಿದಾಗ ರಾಹುಲ್ ಸಿಂಗ್ ಸುಮಾರು 6 ಮಂದಿಯನ್ನು ಆತ ಮದುವೆಯಾಗಿರುವುದು ತಿಳಿದು ಬಂದಿದೆ. ಈಗ ವಂಚನೆ ಮತ್ತು ಇತರ ಆರೋಪಗಳ ಅಡಿ ರಾಹುಲ್ ಸಿಂಗ್ ವಿರುದ್ಧ ದೂರು ದಾಖಲಾಗಿದೆ. ಆರೋಪಿಯನ್ನು ಕೋರ್ಟ್​ ಮುಂದೆ ಹಾಜರುಪಡಿಸಿ, ಪೊಲೀಸ್ ಕಸ್ಟಡಿಗೆ ವಿಚಾರಣೆಗೆ ತೆಗೆದುಕೊಳ್ಳಲಾಗಿದೆ.

Edited By : Vijay Kumar
PublicNext

PublicNext

04/09/2021 10:28 pm

Cinque Terre

50.77 K

Cinque Terre

1

ಸಂಬಂಧಿತ ಸುದ್ದಿ