ಮಾಸ್ಕ್ ಧರಿಸಿಲ್ಲ ಯಾಕೆ ಎಂದು ಸೈನಿಕನ ಮೇಲೆ ಜಾರ್ಖಂಡ್ ಪೊಲೀಸರು ಹಿಗ್ಗಾ ಮುಗ್ಗಾ ಹಲ್ಲೆ ಮಾಡಿದ್ದಾರೆ. ಇದರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಜಾರ್ಖಂಡ್ ರಾಜ್ಯದ ಚತ್ರ ಎಂಬಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ಪೊಲೀಸರು ಮಾಸ್ಕ್ ಧರಿಸಿರದ ಸೈನಿಕನ ಮೇಲೆ ಹಲ್ಲೆ ಮಾಡಿದ್ದಲ್ಲದೇ ಹಲವು ಬಾರಿ ಒದ್ದಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದ ಚತ್ರ ಎಸ್ಪಿ, ಹಲ್ಲೆ ಮಾಡಿದ ಒಟ್ಟು ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ನೀಡಿದ್ದಾರೆ.
PublicNext
02/09/2021 02:16 pm