ಪುಣೆ: ಎಂಥೆಂತಾ ಕ್ಷುಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದರೆ ಕೆಲವೊಂದು ಕಾರಣ ಕೇಳಿದರೆ ಶಾಕ್ ಆಗುವುದು ಗ್ಯಾರಂಟಿ..
ಸದ್ಯ ಇಲ್ಲೊಂದು ಪ್ರಕರಣದಲ್ಲಿ ಗಂಡ ಪ್ರೀತಿಯಿಂದ ಪತ್ನಿಗೆಂದು ತಂದುಕೊಂಡ ಪಾನಿಪುರಿಯಿಂದ ತಂದುಕೊಂಟ್ಟಿದಕ್ಕೆ ಮನನೊಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಹೌದು ತನಗೆ ತಿಳಿಸದೇ ಪತಿ ಪಾನಿಪುರಿ ತಂದಿರುವುದು ಪತ್ನಿಯನ್ನು ಸಿಟ್ಟಿಗೇಳುವಂತೆ ಮಾಡಿದ್ದು, ಜಗಳವಾಡಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿಕ್ಷಾ ಸರ್ವಾಡೆ ಎಂಬ 23 ವರ್ಷದ ಮಹಿಳೆ. ಈಕೆ 2019 ರಲ್ಲಿ ಗಹಿನಿನಾಥ್ ಅವರನ್ನು ವಿವಾಹವಾಗಿದ್ದರು. ಮೊದಲಿನಿಂದಲೂ ದಂಪತಿ ನಡುವೆ ಜಗಳವಾಗುತ್ತಲೇ ಇತ್ತು. ಆದರೆ ಈಗ ಪಾನಿಪುರಿ ವಿಷಯದಿಂದ ಸಾವಿನ ಹಾದಿ ತುಳಿಯುವಂತಾಗಿದೆ. ಇದರಿಂದಾಗಿ ಅವರ 18 ತಿಂಗಳ ಮಗು ಅನಾಥವಾಗಿದೆ.
ಗಹಿನಿನಾಥ್ ಕಚೇರಿಯಿಂದ ಬರುವಾಗ ಪಾನಿಪುರಿ ಪಾರ್ಸೆಲ್ ತಂದಿದ್ದರು. ಆದರೆ ಇದು ಆಕೆಗೆ ಗೊತ್ತಿರಲಿಲ್ಲ. ಪತಿಗಾಗಿ ಆಕೆ ತಿಂಡಿ ರೆಡಿ ಮಾಡಿ ಇಟ್ಟಿದ್ದರು. ಮೊದಲೇ ಗೊತ್ತಿದ್ದರೆ ತಾನು ತಿಂಡಿ ರೆಡಿ ಮಾಡಿ ಇಡುತ್ತಿರಲಿಲ್ಲ ಎಂದು ಆಕೆಯ ಬೇಸರ. ಇದೇ ದಂಪತಿ ನಡುವೆ ಜಗಳಕ್ಕೆ ತಿರುಗಿ ಪತ್ನಿ ವಿಷ ಸೇವಿಸಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾಳೆ. ಈಗ ಪ್ರತಿಕ್ಷಾಳ ಪಾಲಕರು ಅಳಿಯನ ವಿರುದ್ಧ ದೂರು ದಾಖಲು ಮಾಡಿದ್ದು, ತನಿಖೆ ನಡೆಯುತ್ತಿದೆ.
PublicNext
01/09/2021 06:06 pm