ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಾಹನ ಅಡ್ಡಗಟ್ಟಿ ಪರಿಸರವಾದಿಗಳ ಮೇಲೆ ಹಲ್ಲೆ, ದೂರು ದಾಖಲು

ಚಿಕ್ಕಮಗಳೂರು : ರಸ್ತೆ ಬದಿ ಮದ್ಯ ಸೇವಿಸುತ್ತಿದ್ದದ್ದನ್ನ ಪ್ರಶ್ನಿಸಿದ್ದಕ್ಕೆ ಪರಿಸರವಾದಿಗಳ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕಂಬಿಹಳ್ಳಿ ಬಳಿ ನಡೆದಿದೆ. ಚಿಕ್ಕಮಗಳೂರಿನ ಹಿರಿಯ ಪರಿಸರವಾದಿ ಡಿ.ವಿ.ಗಿರೀಶ್, ದಿನೇಶ್, ಕೀರ್ತಿ ಹಾಗೂ ಜಬೀವುಲ್ಲಾ ಗಿರೀಶ್ ಅವರ ಅವರ ಜಿಬ್ಸಿಯಲ್ಲಿ ತರೀಕೆರೆ ಮಾರ್ಗದಿಂದ ಚಿಕ್ಕಮಗಳೂರಿಗೆ ಹಿಂದಿರುಗುವಾ ಈ ಅವಘಡ ಸಂಭವಿಸಿದೆ. ಘಟನೆಗೆ ನಿಖರವಾದ ಕಾರಣ ತಿಳಿಯದಿದ್ದರೂ ಯುವಕರು ರಸ್ತೆ ಮಧ್ಯೆ ಮದ್ಯ ಸೇವಿಸುತ್ತಿದ್ದದ್ದನ್ನ ಪ್ರಶ್ನಿಸಿದ್ದಕ್ಕೆ ಯುವಕರು ಈ ರೀತಿ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ಈ ಮಧ್ಯೆ ಜೀಪಿನಲ್ಲಿದ್ದವರು ಮಹಿಳೆಯನ್ನ ಕಿಚಾಯಿಸಿದರು ಅದಕ್ಕೆ ಯುವಕರು ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಲಿಂಗದಹಳ್ಳಿ ಬಳಿಯ ಕಲ್ಲತ್ತಿಗರಿ ಜಲಪಾತದಿಂದ ಬೈಕಿನಲ್ಲಿ ಬರುತ್ತಿದ್ದ ಯುವಕರು ಗುಂಪಿಗೆ ಜಿಪ್ಸಿಯಲ್ಲಿ ಟಾಂಗ್ ಕೊಡುವ ರೀತಿಯಲ್ಲಿ ಓವರ್ ಟೆಕ್ ಮಾಡಿದರು ಎಂಬ ಕಾರಣಕ್ಕೆ ಯುವಕರು ಹೊಡೆದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಲಿಂಗದಹಳ್ಳಿ ಮಾರ್ಗದಿಂದ ಚಿಕ್ಕಮಗಳೂರಿಗೆ ಬರುತ್ತಿದ್ದ ಗಿರೀಶ್ ತಂಡ ರಸ್ತೆ ಬದಿ ಮದ್ಯ ಸೇವಿಸುತ್ತಿದ್ದ ಯುವಕರ ತಂಡದತ್ತ ಬೊಟ್ಟು ಮಾಡಿ ತೋರಿಸಿದ್ದಾರೆ. ಇದರಿಂದ ಮದ್ಯದ ಅಮಲಿನಿಂದ ಯುವಕರು ಗಾಡಿಯನ್ನ ಫಾಲೋ ಮಾಡಿಕೊಂಡು ಬಂದು ಹೊಡೆದಿದ್ದಾರೆ ಎಂದೂ ಸುದ್ದಿ ಹರಿದಾಡುತ್ತಿದೆ.

ಆದರೆ, ಮದ್ಯ ವಯಸ್ಕರರ ಮೇಲಿ ಯುವಕರು ಗುಂಪು ಈ ರೀತಿ ಮನಸ್ಸೋ ಇಚ್ಛೆ ಹಲ್ಲೆ ಮಾಡಲು ನಿಖರ ಕಾರಣ ಮಾತ್ರ ತಿಳಿದು ಬಂದಿಲ್ಲ. ಜಿಬ್ಸಿಯನ್ನ ಪಾಲೋ ಮಾಡಿಕೊಂಡು ಬಂದ ಯುವಕರ ಗುಂಪು ಹೊಸಪೇಟೆ ಬಳಿ ಅಡ್ಡಹಾಕಲು ನೋಡಿದ್ದಾರೆ ಸಾಧ್ಯವಾಗಿಲ್ಲ. ಬಳಿಕ ಮತ್ತೆ ಅಲ್ಲಿಂದ ಫಾಲೋ ಮಾಡಿಕೊಂಡು ಬಂದು ಕಂಬಿಹಳ್ಳಿ ಬಳಿ ಅಡ್ಡಗಟ್ಟಿ ಹೊಡೆದಿದ್ದಾರೆ. ಹಲ್ಲೆಗೊಳಗಾದ ಡಿ.ವಿ.ಗಿರೀಶ್ ನಗರದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Edited By : Nagesh Gaonkar
PublicNext

PublicNext

31/08/2021 10:51 pm

Cinque Terre

135.73 K

Cinque Terre

7

ಸಂಬಂಧಿತ ಸುದ್ದಿ