ಬೆಳಗಾವಿ ಜಿಲ್ಲೆಯ ರಾಯಭಾಗ ಪಟ್ಟಣದಲ್ಲಿರುವ ಹೆಸ್ಕಾಂ ಕಚೇರಿ ಮೇಲೆ 10ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಳಗಾವಿ ಎಸಿಬಿ ಎಸ್ಪಿ ನೇಮಗೌಡ ನೇತೃತ್ವದ ತಂಡ, ಕಾರ್ಯನಿರ್ವಾಹಕ ಅಭಿಯಂತರ,ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ,ಶಾಖಾಧಿಕಾರಿಗಳ ಕಚೇರಿ ಮೇಲೆ ದಾಳಿ ನಡೆಸಿದೆ.
ಹೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಟ್ರಾನ್ಸಫಾರ್ಮ್ ಕೂರಿಸೋಕೆ ಪದೇ ಪದೇ ಲಂಚಕ್ಕೆ ಬೇಡಿಕೆ ಇಡುತ್ತಿದ್ದರು ಎನ್ನುವ ಆರೋಪದ ಮೇಲೆ ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ಇಂದು ಏಕಾಏಕಿ ದಾಳಿ ನಡೆಸಿ ಕಳೆದ ಒಂದು ಗಂಟೆಯಿಂದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ರಾಯಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದಾಳಿ ಇದಾಗಿದೆ.
PublicNext
31/08/2021 12:57 pm