ಚೆನ್ನೈ: ಆಂಧ್ರ ಪ್ರದೇಶ ಮೂಲದ ಮಹಿಳೆಯೊಬ್ಬಳು ತನ್ನ 18 ತಿಂಗಳ ಮಗುವಿನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ. ಅಷ್ಟೇ ಅಲ್ಲದೆ ತನ್ನ ವಿಕೃತಿಯನ್ನು ಖುದ್ದು ತಾನೇ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದನ್ನು ಕಂಡ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಮಗುವಿನ ವಿಚಾರದಲ್ಲಿ ಕ್ರೌರ್ಯತೆ ಪ್ರದರ್ಶಿಸಿರುವ ತುಳಸಿಯ ಮೇಲೆ ಪೊಲೀಸ್ ಕ್ರಮ ಜರುಗಿಸಬೇಕೆಂದು ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ.
ಕಂದಮ್ಮನಿಗೆ ಮನಬಂದಂತೆ ಥಳಿಸಿದ ನಿಷ್ಕರುಣಿ ತಾಯಿಯ ಹೆಸರು ತುಳಸಿ. ವಲ್ಲಿಪುರಂನ ವಡಿವಜಗನ್ ನಾಲ್ಕು ವರ್ಷದ ಹಿಂದೆ ತುಳಸಿಯನ್ನು ವಿವಾಹವಾಗಿದ್ದರು. ದಂಪತಿ ತಮಿಳುನಾಡಿನ ಮೋತ್ತೂರು ಗ್ರಾಮದಲ್ಲಿ ವಾಸವಾಗಿದ್ದರು. ಆದರೆ ಇಬ್ಬರ ಮಧ್ಯೆ ಜಗಳವಾಗಿದ್ದು, ಇಬ್ಬರೂ ದೂರವಾಗಿದ್ದಾರೆ. ತುಳಸಿ ಆಂಧ್ರ ಪ್ರದೇಶದಲ್ಲಿನ ತನ್ನ ತವರು ಮನೆಯಲ್ಲಿದ್ದು, ಮಗನಿಗೆ ಚಿತ್ರ ಹಿಂಸೆ ನೀಡಿ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ.
ಈ ವಿಡಿಯೋವನ್ನು ತುಳಸಿ ಸಂಬಂಧಿಕರು ಆಕೆಯ ಫೋನ್‌ನಲ್ಲಿ ನೋಡಿದ್ದಾರೆ. ಈ ವಿಚಾರದ ಬಗ್ಗೆ ತಕ್ಷಣವೇ ಅವರು ವಡಿವಾಜಗನ್‌ಗೆ ಮಾಹಿತಿ ನೀಡಿದ್ದಾರೆ. ವಡಿವಾಜಗನ್ ತಕ್ಷಣವೇ ಆಂಧ್ರಪ್ರದೇಶಕ್ಕೆ ಧಾವಿಸಿ, ಮಕ್ಕಳನ್ನು ತನ್ನೊಂದಿಗೆ ವಿಲ್ಲುಪುರಂಗೆ ಕರೆ ತಂದಿದ್ದಾರೆ. ಇತ್ತ ತಮಿಳುನಾಡು ಪೊಲೀಸರು ತುಳಸಿಯನ್ನು ಬಂಧಿಸಿದ್ದಾರೆ.
PublicNext
30/08/2021 07:51 pm