ಬಾಗಲಕೋಟೆ: ಕೊಡಲಿಯಿಂದ ಯುವಕನ ತಲೆಗೆ ಹೊಡೆದು ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆ ಇಳಕಲ್ ತಾಲ್ಲೂಕಿನ ಚಿಕ್ಕನಾಳದಲ್ಲಿ ನಡೆದಿದೆ. ವಿಠ್ಠಲ್ ಸೀಮಿ (27) ಕೊಲೆಯಾದ ಯುವಕ. ಚಿಕ್ಕನಾಳ ಗ್ರಾಮದ ಹತ್ತಿರ ಸಾಯಿ ಪಾರ್ಕ್ ಹೋಟೆಲ್ ಬಳಿ ಸ್ನೇಹಿತರ ಜೊತೆ ವಿಠ್ಠಲ ಊಟಕ್ಕೆ ಬಂದಿದ್ದರು. ಈ ವೇಳೆ ಜಗದೀಶ್ ಭಂಡಾರಿ ಎನ್ನುವವರು ಈತನನ್ನು ನೋಡಿ ಆಕ್ರೋಶಕೊಂಡು ಕೊಡಲಿಯಿಂದ ತಲೆಗೆ ಹೊಡೆದು ಕೊಲೆಗೈದಿದ್ದಾರೆ. ಇಬ್ಬರು ಕುಷ್ಟಗಿ ತಾಲೂಕಿನ ಮಿಟ್ಟಲಕೋಡ ಗ್ರಾಮದ ನಿವಾಸಿಗಳು ಎಂಬುದು ತಿಳಿದುಬಂದಿದೆ.
2016ರಲ್ಲಿ ಜಗದೀಶ್ ಭಂಡಾರಿ ಮನೆಯ ಒಬ್ಬ ಅಪ್ರಾಪ್ತೆ ಜೊತೆ ವಿಠ್ಠಲ್ ನಾಪತ್ತೆಯಾಗಿದ್ದರು. ಆಗ ವಿಠ್ಠಲ ವಿರುದ್ಧ ಈ ಕುಟುಂಬ ಫೊಕ್ಸೋ ಕೇಸ್ ದಾಖಲಿಸಿತ್ತು. ಈ ಪರಿಣಾಮ ವಿಠ್ಠಲ್ ಜೈಲು ಕೂಡ ಸೇರಿದ್ದು, ನಂತರ ಬಿಡುಗಡೆಯಾಗಿದ್ದರು. ಈ ಹಳೆಯ ದ್ವೇಷಕ್ಕೆ ಜಗದೀಶ್ ಅವರು ಈ ಕೊಲೆ ಮಾಡಿದ್ದರೆಂಬ ಶಂಕೆ ವ್ಯಕ್ತವಾಗುತ್ತಿದೆ. ಘಟನೆ ನಡೆದ ಸ್ಥಳಕ್ಕೆ ಅಮೀನಗಡ ಪೊಲೀಸರು ಭೇಟಿ ನೀಡಿ ಈ ಕುರಿತು ಪರಿಶೀಲನೆ ಮಾಡುತ್ತಿದ್ದಾರೆ.
PublicNext
30/08/2021 04:09 pm