ಬಾಗಲಕೋಟೆ: ಆಸ್ತಿ ವಿಚಾರಕ್ಕೆ ಒಂದೇ ಕುಟುಂಬದ ನಾಲ್ವರು ಸಹೋದರರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮಧುರಖಂಡಿಯ ತೋಟದ ಮನೆಯಲ್ಲಿ ಈ ಘಟನೆ ನಡೆದಿದೆ. ಹನುಮಂತ (45), ಮಲ್ಲಪ್ಪ ಉದಗಟ್ಟಿ(35), ಬಸಪ್ಪ ಉದಗಟ್ಟಿ (37) ಹಾಗೂ ಈಶ್ವರ ಉದಗಟ್ಟಿ (35) ಎಂಬಾತರೇ ಕೊಲೆಯಾದ ದುರ್ದೈವಿಗಳು. ಗ್ರಾಮದ ಪುಟಾಣಿ ಮನೆತನದವರೇ ಹತ್ಯೆ ಮಾಡಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.
PublicNext
28/08/2021 09:18 pm