ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೈಲಿನಲ್ಲಿಯೇ ಎಣ್ಣೆ ಪಾರ್ಟಿ.!- ಆರೋಪಿಗಳ ಮೋಜು-ಮಸ್ತಿಗೆ ಖಾಕಿ ಸಾಥ್.?

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಆರೋಪಿಗಳಿಗೆ ಪೊಲೀಸರ ಭಯವೇ ಇಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ. ಇಂತಹ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇಂತಹದ್ದೇ ಘಟನೆಯೊಂದು ದೆಹಲಿಯ ಜೈಲಿನಲ್ಲಿ ನಡೆದಿದೆ.

ಆರೋಪಿಗಳು ಯಾರ ಭಯವೂ ಇಲ್ಲದೆ ಮೋಜು-ಮಸ್ತಿ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋವನ್ನು ನೀರಜ್ ಬಾವಾನ ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾನೆ. ಈ ಪಾರ್ಟಿಗೆ ಪೊಲೀಸರು ಸಾಥ್ ನೀಡಿದ್ರಾ ಎಂಬ ಪ್ರಶ್ನೆ ಎದ್ದಿದೆ.

ದೆಹಲಿ ದರೋಡೆಕೋರ ನೀರಜ್ ಬವಾನಾ ಸಹೋದರರಾದ ರಾಹುಲ್ ಕಲಾ ಮತ್ತು ನವೀನ್ ಬಾಲಿಯನ್ನು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದರು. ಆಗಸ್ಟ್ 5ರಂದು ಇವರನ್ನು ಬಂಧಿಸುವುದಕ್ಕಿಂತಲೂ ಮೊದಲು ಮಂಡೋಲಿ ಜೈಲಿನಲ್ಲಿದ್ದರು. ಆದರೆ ವಿಶೇಷ ಸೆಲ್‌ನಿಂದ ಅವರನ್ನು ಆಗಸ್ಟ್ 10ರವರೆಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ವೈರಲ್ ಆಗಿರುವ ವಿಡಿಯೋ ವಿಶೇಷ ಸೆಲ್‍ನದ್ದೋ ಅಥವಾ ಮಂಡೋಲಿ ಜೈಲಿನದ್ದೋ ಎಂಬುವುದರ ಬಗ್ಗೆ ಮಾಹಿತಿಯಿಲ್ಲ. ಈ ಬಗ್ಗೆ ಪೊಲೀಸರಿಂದ ಕೂಡ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ.

Edited By : Manjunath H D
PublicNext

PublicNext

27/08/2021 12:45 pm

Cinque Terre

109.7 K

Cinque Terre

3