ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಪಿಟ್ಲಾಲಿ, ರಂಗನಾಥಪುರ ಗ್ರಾಮಗಳಲ್ಲಿ ಸರಣಿ ಕಳ್ಳತನವಾಗಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಗ್ರಾಮಗಳ ಆರು ಮನೆಗಳಲ್ಲಿ ಸರಣಿ ಕಳವು ಮಾಡಿರುವ ಕಳ್ಳರು ಮೂರು ಮನೆಗಳ ಬೀಗ ಮುಂದಿದ್ದಾರೆ. ಒಂದು ಮನೆಯ ಬೀರಿನಲ್ಲಿದ್ದ 10 ಸಾವಿರ ರೂಪಾಯಿ ನಗದು, ಇನ್ನೊಂದು ಮನೆಯಲ್ಲಿ 3 ಸಾವಿರ ಹಾಗೂ ಮತ್ತೊಂದು ಮನೆಯಲ್ಲಿ ಒಂದು ಜೊತೆ ಓಲೆ ಕಳವು ಮಾಡಿದ್ದಾರೆ. ಇನ್ನುಳಿದ ಮೂರು ಮನೆಗಳಲ್ಲಿ ಕಳ್ಳತನಕ್ಕೆ ಪ್ರಯತ್ನಿಸಿದ್ದು, ಕಳ್ಳತನ ಮಾಡಲು ವಿಫಲಗೊಂಡಾಗ ಕಳ್ಳರು ಪರಾರಿಯಾಗಿದ್ದಾರೆ.
ವಿಷಯ ತಿಳಿದ ತಕ್ಷಣ ಹಿರಿಯೂರು ಗ್ರಾಮಾಂತರ ಪಿಎಸ್ಐ ಶಶಿಕಲಾ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
PublicNext
27/08/2021 10:55 am