ಮೈಸೂರು : ಎಲ್ಲವೂ ಸಹಜ ಸ್ಥಿತಿಯಲ್ಲಿತ್ತು ಆದ್ರೆ ಬಂಗಾರದಂಗಡಿಯಲ್ಲಿ ನಡೆದ ಶೂಟೌಟ್ ಅರಮನೆ ನಗರಿಯ ಜನತೆಯನ್ನು ಬೆಚ್ಚಿಬೀಳಿಸಿದೆ. ಹೌದು ಅಂಗಡಿ ದರೋಡೆಗೆ ಬಂದ ನಾಲ್ವರು ದುಷ್ಕರ್ಮಿಗಳು ಒಳ ನುಗ್ಗಿ ಮಾಲೀಕನಿಗೆ ಥಳಿಸಿದ್ದಾರೆ. ಬಳಿಕ ಕೈ ಕಾಲು ಕಟ್ಟಿ ಚಿನ್ನಾಭರಣ ಲೂಟಿ ಮಾಡಿದ್ದಾರೆ. ಬಳಿಕ ಅಂಗಡಿಯ ಬಾಗಿಲು ತೆಗೆದು ಓಡಿ ಹೋಗಿದ್ದಾರೆ. ಈ ವೇಳೆ ಅಡ್ಡ ಬಂದವರ ಮೇಲೆ ಗುಂಡು ಹಾಯಿಸಿದ್ದಾರೆ. ಕಿವಿ ಓಲೆ ಖರೀದಿಸಲು ಬಂದಿದ್ದ ದಡದಹಳ್ಳಿ ಚಂದ್ರುಗೆ ಗುಂಡು ತಗಲಿ ಸಾವನ್ನಪ್ಪಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಸದ್ಯ ಶೂಟ್ ಔಟ್ ಪ್ರಕರಣದ ಆರೋಪಿಗಳ ಸುಳಿವು ನೀಡಿದವರಿಗೆ 5 ಲಕ್ಷ ಬಹುಮಾನ ನೀಡುವುದಾಗಿ ಮೈಸೂರು ಕಮಿಷನರ್ ಚಂದ್ರಗುಪ್ತ ಘೋಷಿಸಿದ್ದಾರೆ. ಮಾಹಿತಿ ನೀಡಿದವರ ವಿವರ ಗೌಪ್ಯವಾಗಿಡುವ ಭರವಸೆ ನೀಡಿರುವ ಅವರು, ಹೆಚ್ಚಿನ ಮಾಹಿತಿಗೆ 9480802200 ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.
ಆರೋಪಿಗಳ ಮತ್ತಷ್ಟು ಸಿಸಿ ಕ್ಯಾಮೆರಾ ಪೋಟೋ ಬಿಡುಗಡೆ ಮಾಡಲಾಗಿದೆ. ತನಿಖೆಗೆ 25 ಪೊಲೀಸ್ ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ. 80 ಪೊಲೀಸರು ತನಿಖೆಯಲ್ಲಿ ಭಾಗಿಯಾಗಲಿದ್ದಾರೆ. ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತಂಡಗಳ ರಚನೆ ಮಾಡಲಾಗಿದೆ. ಇದರ ಜೊತೆಗೆ ಸಾರ್ವಜನಿಕರ ಸಹಕಾರಕ್ಕೆ ಮನವಿ ಮಾಡಲಾಗಿದೆ.
ಮೈಸೂರಿನಲ್ಲಿ ತಲ್ಲಣ ಮೂಡಿಸಿರುವ ಶಸ್ತ್ರಸಜ್ಜಿತ ದರೋಡೆಕೋರರ ಕೃತ್ಯ ದೊಡ್ಡ ಮಟ್ಟದಲ್ಲೇ ಸುದ್ದಿ ಮಾಡುತ್ತಿದ್ದು, ಅಮಾಯಕ ಯುವಕನೋರ್ವ ಬಲಿಯಾಗಿರುವುದಕ್ಕೆ ಜನ ಕಂಬನಿ ಮಿಡಿದಿದ್ದಾರೆ.
PublicNext
24/08/2021 07:15 pm