ಬೆಂಗಳೂರು: ನಗರದ ಮಾಗಡಿ ರಸ್ತೆಯ ಎಂಎಂ ಫುಡ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟ ದುರಂತದಲ್ಲಿ ಮೃತಪಟ್ಟರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
ಸಚಿನ್ ಹಾಗೂ ಧನಲಕ್ಷ್ಮಿ ಎಂಬವರು ನಿನ್ನೆ ನಡೆದ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ ನಿನ್ನೆ ಸೌರಬ್ (21) ಮತ್ತು ಮನೀಶ್ (20) ಮೃತರಾಗಿದ್ದರು.
ಈ ಸಂಬಂಧ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಸ್ಥಳದ ಮಾಲೀಕ ಹಾಗೂ ಕಾರ್ಖಾನೆ ಮಾಲೀಕರ ಮೇಲೆ ಎಫ್.ಐ.ಆರ್ ದಾಖಲು ಮಾಡಲಾಗಿದೆ. ಆದರೆ ಕಂಪನಿ ಮಾಲೀಕ ವಿಜಯ್ ಮೆಹ್ತಾ ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು, ಆತನಿಗಾಗಿ ಪೊಲೀಸರು ಸದ್ಯ ಶೋಧ ಕಾರ್ಯ ನಡೆಸಿದ್ದಾರೆ.
PublicNext
24/08/2021 10:53 am