ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮಿತಾಭ್ ಬಚ್ಚನ್ ಗೆ ಸೇರಿದ ಕಾರು ಬೆಂಗಳೂರಿನಲ್ಲಿ ವಶಕ್ಕೆ

ಬೆಂಗಳೂರು: ಯುಬಿ ಸಿಟಿ ಬಳಿ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರಿಗೆ ಸೇರಿದ ಕಾರನ್ನು ಆರ್‌ಟಿಒ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇಂದು ಸಂಜೆ ನಗರದ ಯುಬಿ ಸಿಟಿ ಬಳಿ ಆರ್‌ಟಿಒ ಅಧಿಕಾರಿಗಳು ಪರಿಶೀಲನೆಗೆ ಇಳಿದಿದ್ದರು. ಈ ವೇಳೆ ನಟ ಅಮಿತಾಭ್ ಹೆಸರಿನಲ್ಲಿ ನೊಂದಣಿ ಆಗಿರುವ ಐಷಾರಾಮಿ ರೋಲ್ಸ್ ರಾಯ್ಸ್ ಕಾರು ಪತ್ತೆಯಾಗಿತ್ತು.

ಎರಡು ವರ್ಷದಿಂದ ಇನ್ಶುರೆನ್ಸ್ ಇಲ್ಲದೇ, ಮಹಾರಾಷ್ಟ್ರ ರಿಜಿಸ್ಟರ್ ಆಗಿರುವ ರೋಲ್ಸ್ ರಾಯ್ ಕಾರು ಇನ್ನೂ ಅಮಿತಾಭ್ ಬಚ್ಚನ್ ಹೆಸರಿನಲ್ಲೇ ಇದೆ. ಉದ್ಯಮಿ ಬಾಬು 2019 ರಲ್ಲಿ 6 ಕೋಟಿ ರೂ. ಕೊಟ್ಟು ಅಮಿತಾಭ್ ಬಚ್ಚನ್ ಬಳಿ ಈ ಖರೀದಿ ಮಾಡಿದ ವಿಚಾರ ಪರಿಶೀಲನೆ ವೇಳೆ ತಿಳಿದು ಬಂದಿದೆ. ಆದರೆ ವಾಹನದ ಎಲ್ಲಾ ದಾಖಲೆ ಗಳು ಇನ್ನೂ ಬಚ್ಚನ್ ಹೆಸರಲ್ಲೇ ಇರೋದು ಪತ್ತೆಯಾಗಿದೆ. ಸದ್ಯ ವಾಹನ ವಶಕ್ಕೆ ಪಡೆದಿರುವ ಸಾರಿಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

Edited By : Nagaraj Tulugeri
PublicNext

PublicNext

23/08/2021 10:58 pm

Cinque Terre

82.65 K

Cinque Terre

4

ಸಂಬಂಧಿತ ಸುದ್ದಿ