ಲಕ್ನೋ:ಹಣದ ವಿಚಾರಕ್ಕಾಗಿ ಲಕ್ನೋದ ಆಟೋ ಚಾಲಕನಿಗೆ ಮಹಿಳೆಯೊಬ್ಬರು ನಡು ರಸ್ತೆಯಲ್ಲೇ ಚಪ್ಪಲಿಯಿಂದ ಹೊಡೆದಿರುವ ವಿಡಿಯೋ ವೈರಲ್ ಆಗಿದೆ.
ಆ. 21ರಂದು ಈ ಘಟನೆ ನಡೆದಿದ್ದು, ಆಟೋದಲ್ಲಿ ಪ್ರಯಾಣಿಸಿದ ಬಳಿಕ ಹಣದ ವಿಚಾರಕ್ಕೆ ಮಹಿಳೆ ಮತ್ತು ಆಟೋ ಚಾಲಕನ ನಡುವೆ ಜಗಳವಾಗಿದೆ. ಮೀಟರ್ಗಿಂತ ಹೆಚ್ಚು ಹಣ ಕೇಳುತ್ತಿದ್ದಾನೆ ಎಂದು ಆ ಮಹಿಳೆ ಜೋರಾಗಿ ಕಿರುಚಾಡಿ, ಜಗಳವಾಡಿದ್ದಾಳೆ. ಬಳಿಕ, ತನ್ನ ಚಪ್ಪಲಿಯಿಂದ ಪೊಲೀಸರ ಎದುರಲ್ಲೇ ಆತನಿಗೆ ಹೊಡೆದಿದ್ದಾಳೆ. ಇದನ್ನು ಸುತ್ತಮುತ್ತಲಿದ್ದವರು ವಿಡಿಯೋ ಮಾಡಿಕೊಂಡಿದ್ದಾರೆ. ಲಕ್ನೋದ ತೆದಿ ಪುಲಿಯ ಮೇನ್ ಚೌಕ್ದಲ್ಲಿ ಈ ಘಟನೆ ನಡೆದಿದೆ.
PublicNext
23/08/2021 10:32 pm