ಭೋಪಾಲ್: ಪಾರ್ಕ್‌ಗೆ ಮಧ್ಯ ವಯಸ್ಕ ಮತ್ತು 60 ವರ್ಷ ಮೇಲ್ಪಟ್ಟ ಪುರುಷರನ್ನು ಕರೆಸಿ, ಅಸಭ್ಯವಾಗಿ ವರ್ತಿಸಿ ವಿಡಿಯೋ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಮಹಿಳೆ ಮತ್ತು ಆಕೆಗೆ ಸಹಾಯ ಮಾಡುತ್ತಿದ್ದ ಓರ್ವ ಯುವಕನನ್ನು ಮಧ್ಯಪ್ರದೇಶದ ಭೋಪಾಲ್ ಪೊಲೀಸರು ಬಂಧಿಸಿದ್ದಾರೆ.
ಕೆಲ ದಿನಗಳ ಹಿಂದೆ 65 ವರ್ಷದ ವೃದ್ಧರೊಬ್ಬರು ಪುತ್ರನೊಂದಿಗೆ ಆಗಮಿಸಿ ಮಹಿಳೆ ಮತ್ತು ಯುವಕನ ವಿರುದ್ಧ ದೂರು ದಾಖಲಿಸಿದ್ದರು. ಇಬ್ಬರು ತಮಗೆ 2 ಲಕ್ಷ ರೂ. ನೀಡಬೇಕೆಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ವೃದ್ಧ ಆರೋಪಿಸಿದ್ದರು. ದೂರಿನಲ್ಲಿ ಇಬ್ಬರ ಪರಿಚಯ ತಮಗಿಲ್ಲ ಎಂದು ಕರೆ ಮಾಡುತ್ತಿದ್ದ ಮೊಬೈಲ್ ಸಂಖ್ಯೆ ನೀಡಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ವೃದ್ಧ ವಿಮೆ ಮಾಡಿಸಲು ಮಹಿಳೆಗೆ ಫೋನ್ ಮಾಡಿದ್ದರು. ಇದೇ ವಿಚಾರವಾಗಿ ಇಬ್ಬರ ಮಧ್ಯೆ ಮಾತುಕತೆ ನಡೆದಿತ್ತು. ಕಳೆದ ತಿಂಗಳು ಇಂದೋರ್‌ನಲ್ಲಿರುವ ಮೇಘಧೂತ ಪಾರ್ಕ್ ನಲ್ಲಿ ಭೇಟಿಯಾಗುವಂತೆ ಮಹಿಳೆ ಹೇಳಿದ್ದಾಳೆ. ವೃದ್ಧ ಸಹ ವಿಮೆ ಮಾಡಿಸಲು ದಾಖಲೆಗಳೊಂದಿಗೆ ತೆರಳಿದ್ದರು. ಈ ವೇಳೆ ಇಬ್ಬರು ಕುಳಿತಿರುವ ವಿಡಿಯೋ ಮಾಡಿಕೊಂಡ ಆಕೆಯ ಜೊತೆಗಾರ ಯುವಕ ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿ ಎರಡು ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಿದ್ದಾನೆ.
ಮಹಿಳೆ ಮತ್ತು ಯುವಕ ನಿವೃತ್ತಿ ಪಡೆದ ಪುರುಷರನ್ನೇ ಟಾರ್ಗೆಟ್ ಮಾಡುತ್ತಿದ್ದರು. ಸೋಶಿಯಲ್ ಮೀಡಿಯಾ ಮೂಲಕ ತನ್ನನ್ನು ಪರಿಚಯ ಮಾಡಿಕೊಳ್ಳುತ್ತಿದ್ದ ಮಹಿಳೆ, ಉಪಾಯವಾಗಿ ಮೊಬೈಲ್ ನಂಬರ್ ಪಡೆದುಕೊಳ್ಳುತ್ತಿದ್ದಳು. ತದನಂತರ ಉಪಾಯವಾಗಿ ಪಾರ್ಕ್ ಗಳಿಗೆ ಕರೆಸಿಕೊಂಡು ವೀಡಿಯೋ ಚಿತ್ರೀಕರಿಸಿ ಹಣಕ್ಕಾಗಿ ಪೀಡಿಸುತ್ತಿದ್ದಳು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
PublicNext
23/08/2021 03:53 pm