ಬಳ್ಳಾರಿ: ತಾಯಿ ಮತ್ತು ಮಕ್ಕಳಿಬ್ಬರು ಕಾಲುವೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಸಂಡೂರಿನಲ್ಲಿ ನಡೆದಿದೆ.
ಸಿರಗುಪ್ಪ ತಾಲ್ಲೂಕಿನ ಸಿರಿಗೇರಿ ಗ್ರಾಮ ನಿವಾಸಿ ಪಾರ್ವತಿ (37) ಹಾಗೂ ಅವರ ಮಕ್ಕಳಾದ ಶ್ರೇಯಾ (16), ಮಾನಸ (13) ಮೃತ ದುರ್ದೈವಿಗಳು. ಪಾರ್ವತಿ ಅವರು ಸಂಡೂರಿನಲ್ಲಿ ಕಿರಾಣಿ ಅಂಗಡಿ ಇಟ್ಟಿದ್ದರು.
ಶ್ರೇಯಾ ಶವ ಶುಕ್ರವಾರ ತಿರುಮಲ ನಗರ ಕ್ಯಾಂಪ್‌ನ 15ನೇ ವಿತರಣಾ ಕಾಲುವೆಯಲ್ಲಿ, ಮಾನಸ ಮೃತದೇಹ ಶನಿವಾರ ತಾಳೂರು ರಸ್ತೆಯಲ್ಲಿರುವ 14ನೇ ವಿತರಣಾ ಕಾಲುವೆ ಬಳಿ ಹಾಗೂ ಪಾರ್ವತಿ ಶವ ಭಾನುವಾರ ಅಸುಂಡಿ ಬಳಿಯ 15ನೇ ವಿತರಣಾ ಕಾಲುವೆಯಲ್ಲಿ ಸಿಕ್ಕಿದೆ.
ಪಾರ್ವತಿ ಅವರ ಪತಿ ಶಂಕರ್ ಅವರಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಯಿತು. ಪಿ.ಡಿ ಹಳ್ಳಿ ಹಾಗೂ ಬಳ್ಳಾರಿ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
PublicNext
22/08/2021 09:35 pm