ಮುಂಬೈ: ಜನಸಾಮಾನ್ಯರಿಗೆ ರಕ್ಷಣೆ ನೀಡಬೇಕಾದ ಪೊಲೀಸ್ ಪೇದೆಯೋರ್ವ 17ರ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಅಮಾನವೀಯ ಘಟನೆ ಮಹಾರಾಷ್ಟ್ರದ ಥಾಣೆ ಡೊಂಬಿವಲಿಯಲ್ಲಿ ನಡೆದಿದೆ. ಆರೋಪಿ ಕಾನ್ಸ್‌ಟೇಬಲ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಥಾಣೆಯ ಡೊಂಬಿವಲಿಯ ರಾಮನಗರ ಪೊಲೀಸ್ ಠಾಣೆಗೆ ಸೇರಿದ ಪೊಲೀಸ್ ಪೇದೆ ಬಂಧಿತ ಆರೋಪಿ. ಘಟನೆಯ ನಂತರ ಕಾನ್ಸ್‌ಟೇಬಲ್‌ನನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವರದಿಗಳ ಪ್ರಕಾರ, ನಾವಿರುವ ಕಟ್ಟಡದಲ್ಲೇ ವಾಸವಾಗಿರುವ ಕಾನ್ಸ್‌ಟೇಬಲ್ ನಮ್ಮ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಸಂತ್ರಸ್ತೆಯ ತಾಯಿ ಆರೋಪಿಸಿದ್ದಾರೆ.
PublicNext
22/08/2021 03:10 pm