ಪಾಟ್ನಾ: ಮೊಹರಂ ಮೆರವಣಿಗೆಯ ಮಧ್ಯೆ ಬಂದಿದ್ದಕ್ಕೆ ಸ್ಕಾರ್ಪಿಯೋ ಮೇಲೆ ಗುಂಪೊಂದು ಲಾಠಿ, ರಾಡ್‌ನಿಂದ ದಾಳಿ ಮಾಡಿದ ಅಮಾನವೀಯ ಘಟನೆ ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆಯು ಆಗಸ್ಟ್ 20 (ಶುಕ್ರವಾರ)ದಂದು ಕತಿಹಾರ್‌ನ ಕೋರ್ಹಾ ಪೊಲೀಸ್ ಠಾಣಾ ವ್ಯಾಪ್ತಿಯ ಮೂಸಾಪುರ ಸಮೀಪದ ರಾಷ್ಟ್ರೀಯ ಹೆದ್ದಾರಿ-31ರಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದೇ ವಿಡಿಯೋವನ್ನು ಟ್ವೀಟ್ ಮಾಡಿರುವ ಬಿಜೆಪಿ ಮುಖಂಡ ರಾಕೇಶ್ ತ್ರಿಪಾಠಿ, ಘಟನೆಯ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.
"ಇದು ಅಫ್ಘಾನಿಸ್ತಾನವಲ್ಲ, ಬಿಹಾರದ ಕತಿಹಾರ್. ಸ್ಕಾರ್ಪಿಯೋ ಚಾಲಕ ಪೂರ್ಣಿಯಾದಿಂದ ರೋಗಿಗೆ ಚಿಕಿತ್ಸೆ ಕೊಡಿಸಿ ಆಸ್ಪತ್ರೆ ಹಿಂದಿರುಗುವಾಗ ಪಾಸ್ ಕೇಳಿದರು, ನಂತರ ಮೊಹರಂನ ಉದ್ರಿಕ್ತ ಗುಂಪು ಏನು ಮಾಡಿದೆ ಎಂಬುದು ನಿಮ್ಮ ಮುಂದೆ ಇದೆ. ಈ ವಿಡಿಯೋ ಎಲ್ಲೋ ದುರ್ಗಾ ಮೂರ್ತಿ ಮೆರವಣಿಗೆ ವೇಳೆ ನಡೆದಿದ್ದರೆ, ಕೆಲವರು ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದರು" ಎಂದು ರಾಕೇಶ್ ತ್ರಿಪಾಠಿ ಕಿಡಿಕಾರಿದ್ದಾರೆ.
ವರದಿಯ ಪ್ರಕಾರ, ಘಟನೆಯಲ್ಲಿ ಕಾರಿನ ಎಲ್ಲಾ ಗಾಜುಗಳು ಒಡೆದು ಹೋಗಿವೆ. ಕಾರಿನಲ್ಲಿ ಕುಳಿತಿದ್ದ ಮಸೂದ್ ಆಲಂ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದು, ಅವರ ಮೊಬೈಲ್ ಫೋನ್ ಮತ್ತು ಹಣವನ್ನು ದೋಚಿದ್ದಾರೆ.
PublicNext
21/08/2021 10:32 pm