ಚಿತ್ರದುರ್ಗ: ನಗರದ ಐತಿಹಾಸಿಕ ಕೋಟೆ ಆವರಣದಲ್ಲಿರುವ ಶ್ರೀಗಂಧದ ಮರಗಳನ್ನು ಕಳ್ಳರು ಕಡಿದು ಕದ್ದೊಯ್ದಿರುವ ಘಟನೆ ನಡೆದಿದೆ. ಶ್ರೀಗಂಧದ ಮರಗಳು ಕಳ್ಳತನವಾಗುತ್ತಿದ್ದರು ಭಾರತೀಯ ಪುರಾತತ್ವ ಇಲಾಖೆ ಜಾಣ ಕುರುಡು ಮೆರೆದಿದೆ ಎಂದು ವಾಯು ವಿಹಾರಿಗಳು ಆರೋಪಿಸಿದ್ದಾರೆ.
ಐತಿಹಾಸಿಕ ಕೋಟೆ ಆವರಣದಲ್ಲಿ ವಿವಿಧ ಬಗೆಯ ಗಿಡ, ಮರಗಳ ಜೊತೆಯಲ್ಲಿ ಶ್ರೀಗಂಧದ ಮರಗಳು ಕೂಡ ಬೆಳೆದಿವೆ. ಆದರೆ ಗಂಧದ ಮರಗಳಿಗೆ ಕಳ್ಳರ ಕಾಟ ಹೆಚ್ಚಾಗಿದೆ. ದೊಡ್ಡದಾಗಿ ಬೆಳೆದು ನಿಂತಿರುವ ಶ್ರೀಗಂಧದ ಮರಗಳನ್ನು ಕಳ್ಳರು ಕಡಿದು ಬೇರೆಡೆಗೆ ಸಾಗಿಸುತ್ತಿದ್ದಾರೆ. ಆದರೆ ಇಲ್ಲಿನ ಸೆಕ್ಯುರಿಟಿಗಳಾಗಲಿ ಅಥವಾ ಪುರಾತತ್ವ ಇಲಾಖೆಯ ಸಿಬ್ಬಂದಿಗಳಾಗಲಿ ಗಮನ ಹರಿಸದೆ ಸುಮ್ಮನಿರುವುದು ನೋಡಿದರೆ ಇವರು ಸಹ ಕಳ್ಳರ ಜೊತೆಗೆ ಶಾಮೀಲಾಗಿದ್ದಾರಾ ? ಎಂಬ ಅನುಮಾನ ಪ್ರಶ್ನೆ ಕಾಡತೊಡಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿ ಬಂದಿವೆ.
PublicNext
19/08/2021 04:32 pm