ಲಕ್ಷ್ಮೇಶ್ವರ: ಗದಗ ಜಿಲ್ಲೆಯ ಲಕ್ಷ್ಮೇಶ್ವರ-ಶಿರಹಟ್ಟಿ ತಾಲೂಕಿನ ದೊಡ್ಡೂರು, ಹೀರೆ ಮಲ್ಲಾಪೂರ ಹಾಗೂ ಸುತ್ತಮುತ್ತ ಗ್ರಾಮಗಳ ಜಮೀನುಗಳಲ್ಲಿ ಅಕ್ರಮ ಮಣ್ಣು ತೆಗೆದ್ದರಿಂದ ಬೃಹತ್ ಹೊಂಡಗಳು ತಲೆ ಎತ್ತಿವೆ. ಗಣಿ ಇಲಾಖೆ ಮತ್ತು ರಸ್ತೆಯ ಅಭಿವೃದ್ಧಿ ಹೆಸರಲ್ಲಿ ಗುತ್ತಿಗೆದಾರರು ಕಾನೂನು ಗಾಳಿಗೆ ತೂರಿ ಮನಸೋ ಇಚ್ಛೆ ಮಣ್ಣು ಲೂಟಿ ನಡೆಸಲಾಗಿದೆ ಎಂಬುವಂತ ಆರೋಪ ಕೇಳಿ ಬಂದಿದೆ.
ಲಕ್ಷ್ಮೇಶ್ವರ - ಶಿರಹಟ್ಟಿ ತಾಲೂಕಿನಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದೆ. ಮಣ್ಣು ಬಗೆದ ಜಮೀನುಗಳಲ್ಲಿ ಬೃಹತ್ ಹೊಂಡಗಳು ತೆರೆದುಕೊಂಡಿವೆ. ಈ ಅಕ್ರಮ ದಂಧೆಕೋರರು ಹಳ್ಳಿಗಳ ನೈಸರ್ಗಿಕ ತಿರುವು ಬದಲಿಸಿ ಲೂಟಿ ನಡೆಸಿದ್ದಾರೆ.
ರಸ್ತೆಯ ಅಭಿವೃದ್ಧಿ ಹೆಸರಿನಲ್ಲಿ ರೈತರ ಹೊಲದಲ್ಲಿನ ಮಣ್ಣುಗಳು ಅಕ್ರಮವಾಗಿ ತೆಗೆದು ಬಳಿಸಿಕೊಳ್ಳುತ್ತಿದ್ದಾರೆ ಗುತ್ತಿಗೆದಾರರು. ರೈತರಿಗೆ ಅಷ್ಟು ಇಷ್ಟು ಹಣದ ಆಸೆ ಹಚ್ಚಿ ಅವರ ಹೊಲದಲ್ಲಿ ಮಣ್ಣುನ್ನು ತೆಗೆದು ರಸ್ತೆಗೆ ಹಾಕುತ್ತಿರುವ ಗುತ್ತಿಗೆದಾರರಿಗೆ ಗಣಿ ಮತ್ತು ಭೂ ಇಲಾಖೆಯವರು ಬೆಂಬಲ ಕೊಡುತ್ತಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು. ಲಕ್ಷ್ಮೇಶ್ವರ ತಾಲೂಕಿನ ಹೀರೆಮಲ್ಲಾಪೂರ ಮತ್ತು ದೊಡ್ಡೂರ ಗ್ರಾಮದ ವ್ಯಾಪ್ತಿಯಲ್ಲಿ ಮಣ್ಣು ಲೂಟಿ ನಡೆದಿದೆ. ಯಾವುದೇ ಅನುಮತಿ ಪಡೆಯದೇ ಮಣ್ಣು ಗಣಿಗಾರಿಕೆ ನಡೆಸಿದ್ದಾರೆ. ಗಣಿ ಇಲಾಖೆ ಅಧಿಕಾರಿಗಳ ಕಣ್ಣಿಗೆ ಮಣ್ಣೆರೆಚುವ ಕೆಲಸ ಹೆದ್ದಾರಿ ಕಾಮಗಾರಿ ಮಾಡುವ, ಗುತ್ತಿಗೆದಾರರಿಂದ ನಡೆದಿದೆ. ಒಂದು ವೇಳೆ ಗಣಿ ಇಲಾಖೆ ಅನುಮತಿ ಪಡೆದರೂ ಎರಡೂವರೆ ಮೀಟರ್ನಷ್ಟು ಮಾತ್ರ ಮಣ್ಣು ತೆಗೆಯಬೇಕು. ಆದರೆ, ಗಣಿ ಇಲಾಖೆ ಕಾನೂನಿಗೆ ಲೂಟಿಕೋರರು ಡೋಂಟ್ ಕೇರ್ ಎಂದಿದ್ದಾರೆ.
ಅಧಿಕಾರಿಗಳಿಗೆ ಕೇಳಿದರೆ ಬರ್ತಿವಿ ಕ್ರಮ ತಗೋತಿವಿ, ನಾಳೆ ಬರ್ತಿವಿ ನಾಡಿದ್ದು ಬರ್ತಿವಿ, ಮೇಲಿನ ಅಧಿಕಾರಿಗೆ ಕೇಳ್ತಿವಿ ಅನ್ನೋ ಉಡಾಫೆ ಮಾತುಗಳು ಜನರ ಆಕ್ರೋಶಕ್ಕೆ ಕಾರಣವಾಗಿದೆ. ದೊಡ್ಡೂರು - ಹೀರೆ ಮಲ್ಲಾಪೂರ ಗ್ರಾಮದಲ್ಲಿ ಮಾತ್ರವಲ್ಲ, ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಗಣಿ ಇಲಾಖೆ ಅನುಮತಿ ಇಲ್ಲದೇ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿ, ಸಾವಿರಾರು ಟಿಪ್ಪರ್ ಮಣ್ಣು ಲೂಟಿ ಮಾಡಲಾಗಿದೆ. ಹೆದ್ದಾರಿ ಕಾಮಗಾರಿಗೆ ಮಣ್ಣು ಬಳಸಲಾಗುತ್ತಿದೆ. ಸರ್ಕಾರದ ಕಾಮಗಾರಿ ನೆಪದಲ್ಲಿ ನಾವು ಆಡಿದ್ದೇ ಆಟ ಮಾಡಿದ್ದೇ ಕಾನೂನು ಎಂಬ ವರ್ತನೆಯನ್ನು ಗುತ್ತಿಗೆದಾರರು ತೋರಿದ್ದಾರೆ. ಆದರೆ, ಇಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಗಣಿ ಇಲಾಖೆ ಅಧಿಕಾರಿಗಳು ಗಪ್ ಚುಪ್ ಕುಳಿತಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
PublicNext
19/08/2021 04:13 pm