ಚಿತ್ರದುರ್ಗ : ಎರಡನೇ ಮದುವೆಗೆ ಪೋಷಕರ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೂನಿಕೆರೆ ಗ್ರಾಮ ಬಳಿ ನಡೆದಿದ್ದು ಸೋಮವಾರ ಸಂಜೆ ಬೆಳಕಿಗೆ ಬಂದಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಉಡುವಳ್ಳಿ ಗ್ರಾಮದ ಪುಷ್ಪಲತಾ (20), ಪರುಶುರಾಂಪುರ ಹೋಬಳಿಯ ವೃಂದನಹಳ್ಳಿ ನಿವಾಸಿ ತಿಪ್ಪೇಸ್ವಾಮಿ (33) ಮೃತ ದುರ್ದೈವಿಗಳಾಗಿದ್ದಾರೆ. ಮೃತ ತಿಪ್ಪೇಸ್ವಾಮಿಗೆ ಮೊದಲ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ. ಪುಷ್ಪಲತಾ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಳು ಎನ್ನಲಾಗಿದೆ.
ಮೃತ ವ್ಯಕ್ತಿ ಎರಡನೇ ಮದುವೆಯಾಗಲು ನರ್ಸಿಂಗ್ ವಿದ್ಯಾರ್ಥಿನಿ ಪುಷ್ಪಲತಾಳನ್ನು ಪ್ರೀತಿಯ ಬಲೆಗೆ ಬಿಳಿಸಿಕೊಂಡಿದ್ದನು. ಇವರಿಬ್ಬರ ಪ್ರೀತಿಯ ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಇಬ್ಬರು ಮನನೊಂದು ಹುಡುಗಿ ವಿಷ ಸೇವಿಸಿದರೆ, ಹುಡುಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಹಿಂದೆ ಪುಷ್ಪಲತಾ ಕಾಣೆಯಾಗಿರುವ ಬಗ್ಗೆ ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು ಎಂದು ತಿಳಿದು ಬಂದಿದೆ. ಇದೀಗ ಪುಷ್ಪಲತಾ ಸಾವನ್ನಪ್ಪಿದ್ದಾಳೆ. ವಿಷಯ ತಿಳಿದ ತಕ್ಷಣ ಪಿಎಸ್ಐ ಡಿ.ಜೆ. ಪರಮೇಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
PublicNext
16/08/2021 10:47 pm