ಮುಂಬೈ: ಸಂಬಂಧಿಕರ ವಿವಾಹದಲ್ಲಿ ವ್ಯಕ್ತಿಯೋರ್ವ ಅರಿಶಿಣ ಹಚ್ಚಿದ್ದಕ್ಕೆ ಪತ್ನಿಯನ್ನೇ ಕೊಂದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಸೀಮಾ ಪವಾರ್ (20) ಕೊಲೆಯಾದ ಮಹಿಳೆ. ಈ ಪ್ರಕರಣದ ಸಂಬಂಧ ಆಕೆಯ ಪತಿ ಜನ್ಸನ್ ಪೊಪಟ್ ಪವಾರ್ (25) ಮತ್ತು ಮಾವ ತಾನಾಜಿ ಅಲಿಯಾಸ್ ಯೋಗೀಶ್ ನಾರಾಯಣ್ ಪವಾರ್‌ರನ್ನು ಬಂಧಿಸಲಾಗಿದೆ.
ಸಂಬಂಧಿಕರ ವಿವಾಹ ಕಾರ್ಯಕ್ರಮದಲ್ಲಿ ಪತ್ನಿಯು ಪತಿಗೆ ಅರಿಶಿಣ ಹಚ್ಚಿದ್ದಳು. ಇದರಿಂದಾಗಿ ಇಬ್ಬರ ಮಧ್ಯೆ ಜಗಳವಾಗಿದ್ದು, ಬಳಿಕ ಸೀಮಾ ರೂಮ್‌ನಲ್ಲಿ ಹೋಗಿ ಮಲಗಿದ್ದಾಳೆ. ಅಲ್ಲಿಗೆ ಹೋದ ಜನ್ಸನ್ ಪತ್ನಿ ಸೀಮಾಗೆ ಸ್ಕ್ರೂಡ್ರೈವರ್‌ನಿಂದ ಇರಿದರು ಹಲ್ಲೆ ಮಾಡಿದ್ದಾನೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಸೀಮಾ ಸಾವನ್ನಪ್ಪಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೃತ್ಯ ಎಸಗಿದ ಜನ್ಸನ್ ಹಾಗೂ ಕೃತ್ಯಕ್ಕೆ ಸಹಕರಿಸಿದ ಆತನ ತಂದೆ ತಾನಾಜಿಯನ್ನು ಪೊಲೀಸರು ಬಂಧಿಸಿದ್ದಾರೆ.
PublicNext
15/08/2021 01:56 pm