ವಿಜಯಪುರ: ಮದ್ಯದ ಅಮಲಿನಲ್ಲಿ ವ್ಯಕ್ತಿಯೋರ್ವ ತನ್ನ ಅಣ್ಣನಿಗೆ ಚಾಕುವಿನಿಂದ ಚುಚ್ಚಿ ಕೊಲೆಗೈದ ಘಟನೆ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಮಣೂರು ತಾಂಡಾದಲ್ಲಿ ನಡೆದಿದೆ.
ಮಣೂರು ತಾಂಡಾದ ನಿವಾಸಿ ಹನಮಂತ ರಾಠೋಡ ಕೊಲೆಗೈದ ವ್ಯಕ್ತಿ. ಅರ್ಜುನ ರಾಠೋಡ (38) ಕೊಲೆಯಾದ ಅಣ್ಣ. ಹನಮಂತ ಮದ್ಯದ ಅಮಲಿನಲ್ಲಿ ತಂದೆಯ ಜೊತೆ ಜಗಳಕ್ಕೆ ಇಳಿದಿದ್ದ. ಈ ವೇಳೆ ಜಗಳ ಬಿಡಿಸಲು ಹೋದ ಅರ್ಜುನ್ಗೆ ಹಣಮಂತ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ತೀವ್ರವಾಗಿ ಗಾಯಗೊಂಡ ಅರ್ಜುನ್ ಮೃತಪಟ್ಟಿದ್ದಾನೆ.
ಈ ಘಟನೆ ವೇಳೆ ಇನ್ನೊಬ್ಬ ಸಹೋದರ ನಾಮದೇವ ಶಂಕರ ರಾಠೋಡ (35)ಗೂ ಚಾಕು ತಗುಲಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ದೇವರ ಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
12/08/2021 01:22 pm