ಯಾದಗಿರಿ: ದೇವಸ್ಥಾನದಿಂದ ವಾಪಸ್ ಮನೆಗೆ ಹೊರಟಿದ್ದ ಮಹಿಳೆಯನ್ನು ಅಪಹರಿಸಿದ ಬೀದಿ ಕಾಮುಕರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಇಂತದ್ದೊಂದು ಮನಕಲಕುವ ಅಮಾನುಷ ಘಟನೆ ಯಾದಗಿರಿ ಜಿಲ್ಲೆ ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆಗಸ್ಟ್ 8ರ ಮಧ್ಯರಾತ್ರಿಯಿಂದ ಆಗಸ್ಟ್ 9ರ ಬೆಳಗಿನ ಜಾವದ ಅವಧಿಯಲ್ಲಿ ಈ ಪೈಶಾಚಿಕ ಕೃತ್ಯ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅತ್ಯಾಚಾರಕ್ಕೆ ಒಳಗಾದ ಮಹಿಳೆ ಮತ್ತು ಆಕೆಯ ಸಂಬಂಧಿ ಈ ಬಗ್ಗೆ ದೂರು ದಾಖಲಿಸಿದ್ದಾರೆ.
ಅತ್ಯಾಚಾರಕ್ಕೊಳಗಾದ ಮಹಿಳೆ ಮತ್ತು ಆಕೆಯ ಸಂಬಂಧಿ ದೇವಸ್ಥಾನಕ್ಕೆ ತೆರಳಿ ತಡರಾತ್ರಿ ಮನೆಗೆ ವಾಪಸಾಗುತ್ತಿದ್ದರು. ಇದನ್ನು ಗಮನಿಸಿದ ಮದ್ಯದ ಅಮಲಿನಲ್ಲಿದ್ದ ಇಬ್ಬರು ವಿಕೃತ ಕಾಮುಕ ಯುವಕರು, ಈ ಇಬ್ಬರನ್ನು ಆಟೋದಲ್ಲಿ ಫಾಲೋ ಮಾಡಿದ್ದಾರೆ. ಯಾದಗಿರಿ ಶಹಾಪುರ ಮಾರ್ಗ ಮಧ್ಯದಲ್ಲಿ ಬೈಕ್‍ಗೆ ಅಡ್ಡ ಹಾಕಿದ್ದಾರೆ. ನಂತರ ಮಹಿಳೆಯ ಸಂಬಂಧಿ ಮೇಲೆ ಮನಬಂದಂತೆ ಹಲ್ಲೆ ಮಾಡಿ ಮಹಿಳೆಯನ್ನು ಹೊತ್ತೊಯ್ದು ಅತ್ಯಾಚಾರವೆಸಗಿದ್ದಾರೆ.
ಸದ್ಯ ಇಬ್ಬರು ಕಾಮುಕರನ್ನು ಶಹಾಪೂರ ಪೊಲೀಸರ ಬಲೆಗೆ ಬಿದ್ದಿದ್ದಾರೆ.
PublicNext
10/08/2021 04:45 pm