ನವದೆಹಲಿ: ಗ್ರಾಹಕನೋರ್ವ 1,850 ರೂ. ಸರ್ವಿಸ್ ಚಾರ್ಜ್ ಕೇಳಿದ ಅಂಗಡಿ ಮಾಲೀಕನ ಪಕ್ಕೆಲುಬುನ್ನೇ ಮುರಿದ ಘಟನೆ ದೆಹಲಿ ಸಮೀಪದ ಫರೀದಾಬಾದ್‌ನಲ್ಲಿ ನಡೆದಿದೆ.
ಆರೋಪಿ ಗ್ರಾಹಕ ದಿನೇಶ್ ಭದ್ರಾನಾ ಭಾನುನಾರ (ಆಗಷ್ಟ್ 8)ರಂದು ಅಂಗಡಿ ಮಾಲೀಕ ಗೌರವ್ ಮೇಲೆ ಹಲ್ಲೆ ಮಾಡಿದ್ದಾನೆ. ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಹಲ್ಲೆಯ ದೃಶ್ಯವು ಸೆರೆಯಾಗಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗ್ರಾಹಕ ದಿನೇಶ್ ಭದ್ರಾನಾ ಶುಕ್ರವಾರ ತನ್ನ ಪವರ್ ಇನ್ವರ್ಟರ್ ಸರಿಪಡಿಸಿಕೊಳ್ಳುವಂತೆ ಗೌರವ್ ಅಂಗಡಿಗೆ ಬಂದಿದ್ದ. ಅದರಂತೆ ಪವರ್ ಇನ್ವರ್ಟರ್ ದುರಸ್ತಿ ಮಾಡಿ ತಮ್ಮ ಸೇವೆಗಾಗಿ 1,850 ರೂ. ನಿಗದಿಪಡಿಸಿದ್ದಾರೆ. ಆದರೆ ಇಷ್ಟು ಹಣವನ್ನು ಪಾವತಿಸಲು ಒಪ್ಪದ ದಿನೇಶ್ ಅಂಗಡಿ ಮಾಲೀಕ ಗೌರವ್ ಜೊತೆಗೆ ಜಗಳ ಆರಂಭಿಸಿ, ಮಾತಿಗೆ ಮಾತು ಬೆಳೆದಿದೆ. ಈ ವೇಳೆ ದಿನೇಶ್ ಮಾಲೀಕ ಗೌರವ್ ಮೇಲೆ ಹಲ್ಲೆ ಮಾಡಿದ್ದಾನೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಫರೀದಾಬಾದ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಗೌರವ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
PublicNext
10/08/2021 01:08 pm