ಅಮೃತಸರ : ಸ್ವಾತಂತ್ರ್ಯೋತ್ಸವಕ್ಕೆ ಕೆಲವೇ ದಿನ ಇರುವಾಗ ಅಮೃತಸರ್ ನ ದಲೆಕೆ ಎಂಬ ಗ್ರಾಮದಲ್ಲಿ ಟಿಫಿನ್ ಬಾಕ್ಸ್ ನ ಲ್ಲಿ ಐಇಡಿ (IED) ಪತ್ತೆಯಾಗಿದೆ. ಅಮೃತಸರದ ಹಳ್ಳಿಯಲ್ಲಿ 2 ಕೆ.ಜಿಯಷ್ಟು ಆರ್ ಡಿಎಕ್ಸ್ ತುಂಬಿದ್ದ ಊಟದ ಡಬ್ಬಿಯೊಂದು ಪತ್ತೆಯಾಗಿದೆ. ಇದನ್ನು ಪಾಕಿಸ್ತಾನದ ಕಡೆಯಿಂದ ಡ್ರೋನ್ ನಿಂದ ತಂದು ಹಾಕಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
'ಊಟದ ಡಬ್ಬಿ ಬಾಂಬ್ ಇದ್ದ ಚೀಲದಲ್ಲಿ ಇತರ ಕೆಲವು ಸ್ಫೋಟಕಗಳೂ ಪತ್ತೆಯಾಗಿವೆ' ಎಂದು ಅಮೃತಸರ ಪೊಲೀಸ್ ಮಹಾನಿರ್ದೇಶಕ ದಿನಕರ್ ಗುಪ್ತಾ ಹೇಳಿದ್ದಾರೆ. 'ಈ ಬಾಂಬ್ ಅನ್ನು ಗಡಿಯಾಚೆಯಿಂದ ಡ್ರೋನ್ ಮೂಲಕ ತಂದು ಹಾಕಲಾಗಿದೆ,' ಎಂದು ನಾವು ಶಂಕಿಸಿದ್ದೇವೆ ಎಂದು ಅವರು ಹೇಳಿದರು.
ಬಾಂಬ್ ಪತ್ತೆಯಾದ ಪ್ರದೇಶದಲ್ಲಿ ಕೆಲವು ಡ್ರೋನ್ ಗಳು ಹಾರಾಡಿರುವ ಬಗ್ಗೆ ಗ್ರಾಮದ ಮಾಜಿ ಸರಪಂಚರು ಮಾಹಿತಿ ನೀಡಿದ್ದಾರೆ ಎಂದು ಡಿಜಿಪಿ ಹೇಳಿದ್ದಾರೆ. ಈ ಬೆಳವಣಿಗೆಗೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ರಾಷ್ಟ್ರೀಯ ಭದ್ರತಾ ಸಿಬ್ಬಂದಿಯ (NSG) ಸಹಾಯ ಕೇಳಿದ್ದಾರೆ.
ಕೆಲವು ತಿಂಗಳ ಹಿಂದೆ, ಪಂಜಾಬ್ ನ ಗುರುದಾಸಪುರ ಜಿಲ್ಲೆಯ ಅಂತರಾಷ್ಟ್ರೀಯ ಗಡಿಯ ಬಳಿ ಪಾಕಿಸ್ತಾನದಿಂದ ಹಾರಿ ಬಂದ ಡ್ರೋನ್ನಲ್ಲಿ 11 ಗ್ರೆನೇಡ್ ಗಳು ಪತ್ತೆಯಾಗಿದ್ದವು.
PublicNext
09/08/2021 04:29 pm