ಹಾಸನ: ಪ್ರೀತಿಯ ಬಲೆಗೆ ಸಿಲುಕಿ ಮನೆಯವರ ವಿರೋಧದ ನಡುವೆಯೂ ಮದುವೆ ಮಾಡಿಕೊಂಡ ಪ್ರೇಮಿಗಳು.. ಆಕೆಯ ವಯಸ್ಸು20. ಆತನಿಗೆ 25 ಕ್ಯೂಟ್ ಕ್ಯೂಟ್ ಆದ ಜೋಡಿ ಭವಿಷ್ಯದ ಬಗ್ಗೆ ಸಾಕಷ್ಟು ಕನಸ್ಸು ಕಂಡಿದ್ದರು. ಸದ್ಯ ಈ ಮುದ್ದು ಜೋಡಿಗೆ ಅದ್ಯಾಕ ಕೆಟ್ಟು ಕಣ್ಣು ಬಿತ್ತೊ..ದಾಂಪತ್ಯ ಜೀವನಕ್ಕೆ ಕಾಲಿಟ್ಟ 5 ತಿಂಗಳಿಗೆ ಯುವತಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾಳೆ.
ಚನ್ನರಾಯಪಟ್ಟಣ ತಾಲೂಕಿನ ಬೆಕ್ಕ ಗ್ರಾಮದ ಪೂಜಾ(20) ಮೃತ ದುರ್ದೈವಿ. ಸಕಲೇಶಪುರದ ಅಶ್ವಥ್ ಮತ್ತು ಪೂಜಾ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿಗೆ ಪಾಲಕರು ವಿರೋಧಿಸಿ ಪೂಜಾಳಿಗೆ ಬೇರೊಬ್ಬ ಯುವಕನೊಂದಿಗೆ ಮದುವೆ ನಿಶ್ಚಿತಾರ್ಥ ನೆರವೇರಿಸಿದ್ದರು. ಇದಾದ 20 ದಿನಕ್ಕೆ ಪೂಜಾ, ತನ್ನ ಪ್ರಿಯಕರ ಅಶ್ವಥ್ ಜತೆ ಮದುವೆ ಆಗಿದ್ದಳು.
ದಂಪತಿ ಇಬ್ಬರೂ ಸಕಲೇಶಪುರ ಪಟ್ಟಣದಲ್ಲಿ ವಾಸವಿದ್ದರು. ಇಂದು(ಗುರುವಾರ) ಸಕಲೇಶಪುರದಲ್ಲಿ ಹೇಮಾವತಿ ಸೇತುವೆ ಮೇಲಿಂದ ನದಿಗೆ ಹಾರಿ ಪೂಜಾ ಪ್ರಾಣ ಬಿಟ್ಟಿದ್ದಾಳೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೂಜಾಳ ಪಾಲಕರು, ನನ್ನ ಮಗಳಿಗೆ ಗಂಡನ ಮನೆಯಲ್ಲಿ ವರದಕ್ಷಿಣೆ ತರುವಂತೆ ಕಿರುಕುಳ ಕೊಡುತ್ತಿದ್ದರು ಎಂದಿದ್ದಾರೆ. ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
05/08/2021 07:35 pm