ಲಕ್ನೋ: ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೀರತ್ ಮೂಲದ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಅರ್ಜೂ ಪವಾರ್ (30), ಅನೂಪ್‌ಶಹರ್ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ನಿಯೋಜನೆಗೊಂಡಿದ್ದರು. ಆದರೆ ಶುಕ್ರವಾರ ರಾತ್ರಿ ಬುಲಂದ್‌ಶಹರ್ ಜಿಲ್ಲೆಯ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಬುಲಂದ್‌ಶಹರ್ ಎಸ್‌ಎಸ್‌ಪಿ ಸಂತೋಷ್ ಕುಮಾರ್ ಸಿಂಗ್, "ಅರ್ಜೂ ಪವಾರ್ ಅವರ ಮೃತ ದೇಹದ ಬಳಿ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ 'ನನ್ನ ಸಾವಿಗೆ ನಾನೇ ಹೊಣೆ' ಎಂದು ಬರೆಯಲಾಗಿದೆ. ಡೆತ್‌ನೋಟ್ ಹಾಗೂ ಪೆನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಅರ್ಜೂ ಪವಾರ್ ಅವರ ಮೊಬೈಲ್ ಫೋನ್ ಲಾಕ್ ಆಗಿದೆ. ಹೀಗಾಗಿ ನಾವು ಅವರು ಕಳೆದ ಕೆಲವು ಕರೆಗಳನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ" ಎಂದು ತಿಳಿಸಿದ್ದಾರೆ.
PublicNext
02/08/2021 09:02 pm