ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ : ಫಿನಾನ್ಶಿಯರ್ ಅಜೇಂದ್ರ ಶೆಟ್ಟಿ ಕೊಲೆ ನಾನೇ ಮಾಡಿದ್ದು:ಬಾಯಿಬಿಟ್ಟ ಪಾರ್ಟ್ ನರ್ ಅನೂಪ್!

ಕುಂದಾಪುರ: ಕುಂದಾಪುರ ತಾಲೂಕಿನ ಕಾಳಾವರದಲ್ಲಿ ಫಿನಾನ್ಶಿಯರ್ ಅಜೇಂದ್ರ ಶೆಟ್ಟಿಯನ್ನು ನಾನೇ ಕೊಲೆ ಮಾಡಿದ್ದು ಎಂದು ಪಾರ್ಟನರ್ ಅನೂಪ್ ಬಾಯಿ ಬಿಟ್ಟಿದ್ದಾನೆ.ಈ ಸಂಬಂಧ ಅನೂಪ್ ನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.

ಇವತ್ತು ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಉಡುಪಿ ಎಸ್ಪಿ ವಿಷ್ಣುವರ್ದನ ,ಕುಂದಾಪುರದ ಕಾಳಾವಾರದಲ್ಲಿ ಜುಲೈ 30 ರಂದು ನಡೆದಿದ್ದ ಕೊಲೆ ಪ್ರಕರಣದ ಆರೋಪಿ ಅನೂಪ್ ನನ್ನು ಗೋವಾ ರಾಜ್ಯದ ಕೊಲ್ವಾ ಬೀಚ್ ಬಳಿ ಬಂಧಿಸಿದ್ದೇವೆ.ಘಟನೆ ನಡೆದು 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಲಾಗಿದೆ.

ಹಣಕಾಸಿನ ವ್ಯವಹಾರದ ವೈಮನಸ್ಸೇ ಈ ಕೊಲೆಗೆ ಕಾರಣ.ಕೊಲೆಯಲ್ಲಿ ಇತರರೂ ಭಾಗಿಯಾಗಿರುವ ಸಾಧ್ಯತೆ ಇದೆ.ಆರೋಪಿ ಈ ಮೊದಲು ದುಬೈ ,ಸಿಂಗಾಪುರದಲ್ಲಿ ಕೆಲಸ ಮಾಡುತ್ತಿದ್ದ ಎಂದು ಎಸ್ ಪಿ ವಿಷ್ಣುವರ್ಧನ್ ಮಾಹಿತಿ ನೀಡಿದ್ದಾರೆ.

Edited By : Manjunath H D
PublicNext

PublicNext

02/08/2021 02:21 pm

Cinque Terre

71.92 K

Cinque Terre

0