ತುಮಕೂರು: ಹೆರಿಗೆ ಮಾಡಿದ ಒಂದು ಗಂಟೆಯಲ್ಲಿ ಮಹಿಳೆ ಸಾವನ್ನಪ್ಪಿದ ಘಟನೆ ಜಿಲ್ಲೆಯ ತಿಪಟೂರು ನಗರದ ಜೇನುಕಲ್ ನರ್ಸಿಂಗ್ ಹೋಮ್ನಲ್ಲಿ ನಡೆದಿದ್ದು, ಮಗಳ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆಕೆಯ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ತುಮಕೂರಿನ ಕುಂದೂರು ಗ್ರಾಮದ ಮಮತಾ (34) ಮೃತ ಮಹಿಳೆ. ಮಮತಾ ಅವರು ಹೆರಿಗೆಗಾಗಿ ಶನಿವಾರ ರಾತ್ರಿ ಜೇನುಕಲ್ ನರ್ಸಿಂಗ್ ಹೋಮ್‌ಗೆ ದಾಖಲಾಗಿದ್ದರು. ಈ ವೇಳೆ ವೈದ್ಯರು, ಮಮತಾ ಅವರಿಗೆ ಸಹಜ ಹೆರಿಗೆ ಮಾಡಲಿದ್ದೇವೆ ಎಂದು ಹೇಳಿದ್ದರು. ಆದರೆ ಸಿಜೇರಿಯನ್ ಹೆರಿಗೆ ಮಾಡಿದ ಒಂದು ಗಂಟೆಯಲ್ಲಿ ಮಮತಾ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
PublicNext
01/08/2021 09:43 pm