ಮೈಸೂರು: 11 ವರ್ಷದ ಬಾಲಕನನ್ನು 40 ನಿಮಿಷಗಳ ಕಾಲ ಗೇಟ್‌ಗೆ ಕಟ್ಟಿ ಹಾಕಿ ಪಿಎಸ್ಐ ಒಬ್ಬರು ಆತನ ಮೇಲೆ ಹಲ್ಲೆ ಮಾಡಿದ ಘಟನೆ ನಗರದ ಗಾಯತ್ರಿಪುರಂ ಕ್ವಾರ್ಟರ್ಸ್ ನಲ್ಲಿ ನಡೆದಿದೆ. ಆತ ಸಮೀಪದಲ್ಲೇ ಬೇವಿನ ಸೊಪ್ಪು ಕೀಳಲು ಬಂದಿದ್ದು ಇದನ್ನು ಕಂಡ ಪಿಎಸ್ಐ ಬಾಲಕನ ಮೇಲೆ ಈ ಕ್ರೌರ್ಯಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬಳಿಕ, ಬಾಲಕನ ಸ್ಥಿತಿ ಕಂಡು ಕರ್ನಾಟಕ ಮಾನವ ಹಕ್ಕು ಜನಜಾಗೃತಿ ವೇದಿಕೆ ಸದಸ್ಯರು ಪೊಲೀಸ್ ಅಧಿಕಾರಿಯನ್ನು ಪ್ರಶ್ನಿಸಿದ್ದಾರೆ. ನಂತರ ಬಾಲಕನನ್ನು ಪಿಎಸ್ಐ ಬಿಟ್ಟು ಕಳಿಸಿದ್ದಾರೆ.
ದೇವರ ಪೂಜೆಗಾಗಿ ಬೇವಿನ ಸೊಪ್ಪು ತರಲು 11 ವರ್ಷದ ಬಾಲಕ, ಪೊಲೀಸ್ ಅಧಿಕಾರಿಯ ಮನೆಯ ಪಕ್ಕದ ಖಾಲಿ ಸೈಟ್ ನಲ್ಲಿದ್ದ ಬೇವಿನ ಮರದ ಬಳಿ ಬಂದಿದ್ದ. ಸೊಪ್ಪು ಕೀಳುವ ವೇಳೆ ಬಾಲಕನ್ನು ಕೆಳಗಿಸಿ ಗೇಟ್‌ಗೆ ಕಟ್ಟಿ ಹಾಕಿ ಥಳಿಸಿದ ಆರೋಪ ಎಸ್ಐ ಮೇಲೆ ಕೇಳಿಬಂದಿದೆ.
PublicNext
30/07/2021 09:45 pm