ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಸ್ಲಾಂಗೆ ವಿರುದ್ಧ ಮಾತನಾಡಿ ಜನರನ್ನು ನಗಿಸುತ್ತಿಯಾ? ಎಂದ ಖ್ಯಾತ ಹಾಸ್ಯನಟನಿಗೆ ಗುಂಡಿಕ್ಕಿ ಹತ್ಯೆ

ಕಾಬುಲ್‌: ಅಮೆರಿಕ ಸೇನೆ ಹಾಗೂ ನ್ಯಾಟೊ ಪಡೆಗಳು ಅಫ್ಘಾನಿಸ್ತಾನದಿಂದ ಹೊರನಡೆದ ನಂತರ ಅಲ್ಲಿ ಮತ್ತೆ ತಾಲಿಬಾನಿಗಳ ಅಟ್ಟಹಾಸ ಮಿತಿಮೀರಿದೆ. ಇಸ್ಲಾಂ ಮೂಲಭೂತವಾದವನ್ನು ಜನರ ಮೇಲೆ ಹೇರಿ ಇಡೀ ದೇಶದಲ್ಲಿ ತಮ್ಮದೇ ಸರ್ಕಾರ ರಚಿಸಲು ಮುಂದಾಗಿದ್ದಾರೆ. ಇದರಿಂದ ಜನರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ.

ಇದಕ್ಕೆ ಸಾಕ್ಷಿ ಎನ್ನುವಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ತಾಲಿಬಾನಿಗಳ ಕ್ರೌರ್ಯಕ್ಕೆ ಸಾಕ್ಷಿಯಾಗಿದೆ. ಅಫ್ಘಾನಿಸ್ತಾನದ ಜನಪ್ರಿಯ ಹಾಸ್ಯ ನಟ ಖಾಶಾ ಜ್ವಾನ್ (ನಜರ್ ಮೊಹಮ್ಮದ್) ಅವರನ್ನು ತಾಲಿಬಾನಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಕಂದಹಾರ್ ಪ್ರದೇಶದ ತಮ್ಮ ಮನೆಯಿಂದ ಹೊರಗೆ ನಡೆದುಕೊಂಡು ಹೋಗುವಾಗ ಖ್ವಾಶಾ ಅವರನ್ನು ತಾಲಿಬಾನಿಗಳು ಅಪಹರಿಸಿದ್ದು, ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ‘ಇಸ್ಲಾಂನಲ್ಲಿ ಹುಟ್ಟಿ ನೀನು ಜನರನ್ನು ನಗಿಸುವ ಕೆಲಸ ಮಾಡುತ್ತಿಯಾ’ ಎಂದು ಕಪಾಳಕ್ಕೆ ಹೊಡೆದಿದ್ದಾರೆ.

ನಂತರ ಕಾರಿನಿಂದ ಹೊರಗೆಳೆದು ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಆದರೆ ತಾಲಿಬಾನಿಗಳು ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆದಿದ್ದಾರೆ ಎನ್ನಲಾಗಿದೆ.

Edited By : Manjunath H D
PublicNext

PublicNext

29/07/2021 02:37 pm

Cinque Terre

61.8 K

Cinque Terre

7

ಸಂಬಂಧಿತ ಸುದ್ದಿ