ಗೋಕಾಕ : ನಾಲ್ಕು ವರ್ಷಗಳ ಹಿಂದೆ ತಮ್ಮ ಸ್ನೇಹಿತ ರಾಜು ರೋಹಿತ್ ಪಾಟೀಲ್ ಎಂಬಾತನನ್ನು ಅಮಾನುಷ ಕೊಲೆ ಮಾಡಿದ ಏಳು ಜನ ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 2017 ರ ಜುಲೈ 27 ರಂದು ಪಟ್ಟಣದ ಸಿದ್ದೇಶ್ವರ ಜಾತ್ರೆಯ ಜೋಕಾಲಿ ಆಟದ ಸಂದರ್ಭದಲ್ಲಿ ರಾಜು ಪಾಟೀಲ್ ಹಾಗೂ ಆರೋಪಿತರ ನಡುವೆ ಜಗಳವುಂಟಾಗಿತ್ತು.
ನಂತರ ಜಗಳ ವಿಕೋಪಕ್ಕೆ ತಿರುಗಿದಾಗ ಆರೋಪಿತರು ಗುಂಪು ಕಟ್ಟಿಕೊಂಡು ರಾಜು ಪಾಟೀಲನ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದರು. ಜಗಳ ಬಿಡಿಸಲು ಹೋದ ಅಕ್ಷಯ ಘೋರ್ಪಡೆ ಹಾಗೂ ರಾಹುಲ್ ಎಂಟಗೌಡರ ಮೇಲೆಯೂ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು.
ಮಲ್ಲಿಕಾರ್ಜುನ ಭಜಂತ್ರಿ, ಅರ್ಜುನ ಚಿಕ್ಕೋರ್ಡೆ, ಕುಮ್ಯಾ ಸಣದಿ, ಪರಸು ಖಾನಪಣ್ಣವರ, ಶ್ರೀಧರ ಕಬ್ಬೂರ, ವಿಜಯ ಶೀಲವಂತ ಹಾಗೂ ಪರಶುರಾಮ ಶೀನಪ್ಪಗೋಳ ಶಿಕ್ಷೆಗೊಳಗಾದವರು.
PublicNext
28/07/2021 07:07 pm