ರಾಜಸ್ತಾನ : ಅಪ್ಪ ಅಂದ್ರೆ ಆಕಾಶ ಆಸರೆಯಾಗಬೇಕಿದ್ದ ಅಪ್ಪನೆ ಮಗಳ ಬಾಳಲ್ಲಿ ಕ್ರೂರಿಯಾಗಿದ್ದಾನೆ. ಹೌದು ಅಪ್ರಾಪ್ತ ಮಲ ಮಗಳ ಮೇಲೆ ಪಾಪಿ ತಂದೆಯೊಬ್ಬ ಅತ್ಯಾಚಾರ ಎಸಗಿ, ಮತ್ತೋರ್ವ ಮಲ ಮಗಳ ಮೇಲೆ ಕಾಮುಕ ಕಣ್ಣು ಬೀರಿದ್ದ ಪಾಪಿ ತಂದೆಯನ್ನು ರಾಜಸ್ತಾನದ ಅಲ್ವಾರ್ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಇಬ್ಬರು ಬಾಲಕಿಯರ ತಂದೆ ಕ್ಯಾನ್ಸರ್ ಕಾಯಿಲೆಯಿಂದ ಸಾವಿಗೀಡಾಗಿದ್ದರು. ಬಾಲಕಿಯರ ತಾಯಿ, ಆರೋಪಿ ಜೊತೆ ಮೂರು ವರ್ಷಗಳ ಹಿಂದೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದರು. ಕಳೆದ ಕೆಲ ದಿನಗಳಿಂದ ಆರೋಪಿ ತಂದೆ, ಮಲ ಮಕ್ಕಳ ಮೇಲೆ ಎಸಗುತ್ತಿರುವ ಕಿರುಕುಳ ನೋಡಿದ ತಾಯಿ ತನ್ನ ಸಂಬಂಧಿಕರ ಮನೆಗೆ ಕಳಿಸುತ್ತಾರೆ. ನಂತರ ಅವರನ್ನು ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಸೇರಿಸುತ್ತಾರೆ.
PublicNext
28/07/2021 06:41 pm