ಬೆಂಗಳೂರು: ಕಾಲೇಜು ಪ್ರಿಯಕರನ ಮಾತು ನಂಬಿ ಪತಿಯಿಂದ ವಿಚ್ಛೇದನ ಪಡೆದ ಪ್ರತಿಷ್ಠಿತ ಕಂಪನಿಯ ಮಹಿಳಾ ಉದ್ಯೋಗಿ ಈಗ ಫಜೀತಿಗೆ ಸಿಲುಕಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಸಂಗವೊಂದು ಬೆಂಗಳೂರಿನಲ್ಲಿ ನಡೆದಿದೆ.
ಹೌದು. ಬಿಟಿಎಂ ನಿವಾಸಿ 30 ವರ್ಷದ ಮಹಿಳೆಯ ಬದುಕಿನಲ್ಲಿ ವಿಲನ್ ಆಗಿರುವ ಪ್ರಿಯಕರ ಸಂಜಯ್ (30) ವಿರುದ್ಧ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯು ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, 2015ರಲ್ಲಿ ಪಾಲಕರು ಸೂಚಿಸಿದ ಖಾಸಗಿ ಕಂಪನಿ ಉದ್ಯೋಗಿಯೊಬ್ಬರನ್ನು ವಿವಾಹವಾಗಿದ್ದರು. ಆದರೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಆಕೆಯನ್ನು ಪ್ರೀತಿಸಿದ್ದ ಸಂಜಯ್ 2017ರಲ್ಲಿ ಸಂಪರ್ಕಿಸಿದ್ದ. ಅಷ್ಟೇ ಅಲ್ಲದೆ ವಿವಾಹವಾಗುವುದಾಗಿ ನಂಬಿಸಿದ್ದ.
ಸಂಜಯ್ ಮಾತಿಗೆ ಮರುಳಾದ ಮಹಿಳೆ ಅನ್ಯೋನ್ಯವಾಗಿದ್ದ ಪತಿಗೆ ನಡೆದ ಸಂಗತಿ ವಿವರಿಸಿ ಆತನಿಂದ ವಿಚ್ಛೇದನ ಪಡೆದಿದ್ದಳು. ಬಳಿಕ ಸಂಜಯ್ ಜೊತೆಗೆ ಜೀವನ ನಡೆಸುತ್ತಿದ್ದರು. ಆದರೆ ಈಗ ಸಂಜಯ್ ಎಸ್ಕೇಪ್ ಆಗಿದ್ದಾನೆ. ಹೀಗಾಗಿ ಮಹಿಳೆಯು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
PublicNext
01/03/2021 08:31 am