ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಾಯಿಯ ವಿರೋಧದ ನಡ್ವೆ ಗೆಳೆಯ ಕೈ ಹಿಡಿದ ನವ ವಿವಾಹಿತೆ ನೇಣಿಗೆ ಶರಣು

ಶಿವಮೊಗ್ಗ: ತಾಯಿಯ ವಿರೋಧದ ನಡುವೆಯೂ ೩ ತಿಂಗಳ ಹಿಂದಷ್ಟೇ ಗೆಳೆಯ ಕೈ ಹಿಡಿದಿದ್ದ ನವ ವಿವಾಹಿತೆಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಶಿವಮೊಗ್ಗ ತಾಲೂಕಿನ ಕುಂಸಿಯಲ್ಲಿ ನಡೆದಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕುಂಸಿಯ ಕನಕನಗರ ಕವನ (19) ಆತ್ಮಹತ್ಯೆಗೆ ಶರಣಾಗಿದ್ದ ನವ ವಿವಾಹಿತೆ. ಆಕೆಯ ಪತಿ ಭರತ್ ಮತ್ತು ಮಾವ ಚಂದ್ರಪ್ಪ ಬಂಧಿತ ಆರೋಪಿಗಳು. ಅಶೋಕನಗರದ ಕವನ ಮತ್ತು ಕುಂಸಿ ಕನಕನಗರದ ಭರತ್ ಪರಸ್ಪರ ಪ್ರೀತಿಸಿದ್ದರು. ಭರತ್ ಶಿವಮೊಗ್ಗದಲ್ಲಿ ಫವರ್ ಡೆಕೋರೇಟರ್ ಆಗಿದ್ದರೆ, ಕವನ ದ್ವಿತೀಯ ಪಿಯುಸಿ ಪೂರೈಸಿದ್ದಳು. ಪ್ರೀತಿ ವಿಚಾರವನ್ನು ಕವನ ತನ್ನ ತಾಯಿಗೆ ತಿಳಿಸಿದ್ದಳು. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಕುಂಸಿಯಲ್ಲಿದ್ದ ಭರತ್ ಮನೆಗೆ ತೆರಳಿದ್ದ ಕವನ, ಆ ಬಳಿಕ ಗುಡ್ಡೇಕಲ್‌ನಲ್ಲಿ ವಿವಾಹವಾಗಿ ಪತಿಯ ಮನೆ ಸೇರಿದ್ದಳು.

ಭರತ್ ಹಾಗೂ ಆತನ ತಂದೆ ವರದಕ್ಷಿಣೆಗಾಗಿ ಕವನಗೆ ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದ ಕವನ ಫೆ.23ರಂದು ಸಂಜೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಪತಿ ಭರತ್, ಅತ್ತೆ ನಾಗಮ್ಮ ಮತ್ತು ಮಾವ ಚಂದ್ರಪ್ಪ ಕಿರುಕುಳ ಕಾರಣ ಎಂದು ಕವನ ತಾಯಿ ಭಾಗ್ಯಲಕ್ಷ್ಮಿ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಸಂಬಂಧ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕವನ ಪತಿ ಹಾಗೂ ಮಾವನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

Edited By : Vijay Kumar
PublicNext

PublicNext

27/02/2021 05:40 pm

Cinque Terre

63.16 K

Cinque Terre

2

ಸಂಬಂಧಿತ ಸುದ್ದಿ