ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಆರ್‌ಎಸ್ ಡ್ಯಾಂ ಮೇಲೆ ಜಾಲಿ ಡ್ರೈವ್: ಪೊಲೀಸ್ ಜೀಪ್ ದುರ್ಬಳಕೆ

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂ ಮೇಲೆ ಜೀಪ್​ ಚಲಾಯಿಸಿ ಯುವಕನೊಬ್ಬ ಅಂಧಾದರ್ಬಾರ್ ನಡೆಸಿರುವುದು ಬೆಳಕಿಗೆ ಬಂದಿದೆ. ಬೇಸರದ ಸಂಗತಿಯೆಂದರೆ ಆ ಜೀಪ್​ ಪೊಲೀಸ್ ವಾಹನವಾಗಿದ್ದು, ಯುವಕನೇ ಆ ಪೊಲೀಸ್​ ವಾಹನ ಚಲಾಯಿಸಿದ್ದಾನೆ. ಮತ್ತು ಆ ವಾಹನದ ನಿರ್ವಹಣೆ ಹೊತ್ತಿದ್ದ ಪೊಲೀಸ್​ ಅಧಿಕಾರಿ ಆ ಯುವಕನ ಪಕ್ಕದಲ್ಲೇ ಕುಳಿತಿದ್ದು, ಇಡೀ ಪ್ರಯಾಣದುದ್ದಕ್ಕೂ ಮೂಕ ಪ್ರೇಕ್ಷಕರಾಗಿದ್ದಾರೆ. ಆ ಯುವಕನ ಧಾರ್ಷ್ಟ್ಯ ಎಷ್ಟಿತ್ತೆಂದರೆ ವಾಹನ ಚಲಾಯಿಸಿ, ಆ ಇಡೀ ವೃತ್ತಾಂತವನ್ನು ವಿಡಿಯೋ ಮಾಡಿಸಿಕೊಂಡಿದ್ದಾನೆ. ಡ್ರೈವರ್ ಸೀಟ್ ಪಕ್ಕ ಕುಳಿತ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಯಿಂದಲೇ ವಿಡಿಯೋ ಮಾಡಿಸಿದ್ದಾನೆ.

ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದ್ದು ಸಾರ್ವಜನಿಕರು ಹಾಗೂ ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕೆಆರ್‌ಎಸ್ ಡ್ಯಾಂ ಮೇಲೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ನಿರ್ಬಂಧಿತ ಪ್ರದೇಶದಲ್ಲಿ ಜೀಪ್ ಓಡಿಸಿ ಅದನ್ನು ವಿಡಿಯೋ ಮಾಡಿದ್ದಲ್ಲದೇ ಹೆಬ್ಬುಲಿ ಚಿತ್ರದ ಹಾಡೊಂದನ್ನು ಆ ವಿಡಿಯೋಗೆ ಎಡಿಟ್ ಮಾಡಿದ್ದಾನೆ.

Edited By : Nagaraj Tulugeri
PublicNext

PublicNext

27/02/2021 01:12 pm

Cinque Terre

93.36 K

Cinque Terre

2

ಸಂಬಂಧಿತ ಸುದ್ದಿ