ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಡಿ ರೌಡಿಗಳು, ರೌಡಿ ಶೀಟರ್‌ಗಳ ಹಾವಳಿ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಲು ಬೆಂಗಳೂರಿನ ಕೇಂದ್ರ ಅಪರಾಧ ಶಾಖೆ ಭರ್ಜರಿ ಕಾರ್ಯಾಚರಣೆ ನಡೆಸಿದೆ.
ಕಾರಿನಲ್ಲಿ ಲಾಂಗ್, ಮಚ್ಚು ಸಾಗಿಸುತ್ತಿರುವ ಬಗ್ಗೆ ಮಾರತ್ತಹಳ್ಳಿ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ತಕ್ಷಣವೇ ಕಾರನ್ನು ತಡೆದು ಪರಿಶೀಲನೆ ನಡೆಸಿದ ಪೊಲೀಸರು ಇಬ್ಬರು ರೌಡಿ ಶೀಟರ್ ಸೇರಿದಂತೆ 11 ಜನರನ್ನು ಬಂಧಿಸಿ 18 ಶಸ್ತ್ರಾಸ್ತ್ರಗಳು ಮತ್ತು 2 ಕಾರುಗಳು ವಶಕ್ಕೆ ಪಡೆದಿದ್ದಾರೆ.
PublicNext
24/02/2021 10:40 am