ಇಸ್ಲಾಮಾಬಾದ್: ಬಲೂಚಿಸ್ತಾನ್ ನಿಂದ ಚುನಾಯಿತರಾಗಿದ್ದ ನ್ಯಾಷನಲ್ ಆಸೆಂಬ್ಲಿಯ ಸದಸ್ಯ ಮತ್ತು ಉಲೇಮಾ-ಇ- ಇಸ್ಲಾಂ ಮುಖಂಡ ಮೌಲಾನಾ ಸಲಾಹುದ್ದೀನ್, 14 ವರ್ಷದ ಬಾಲಕಿಯನ್ನು ಮದುವೆ ಆಗಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಅಯುಬಿ ಪೊಲೀಸರ ವಿಚಾರಣೆಗೆ ಒಳಪಟ್ಟಿದ್ದಾರೆ.
ಬಾಲಕಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದು, ಶಾಲಾ ದಾಖಲಾತಿ ಪ್ರಕಾರ ಜನ್ಮ ದಿನ ಅಕ್ಟೋಬರ್ 28, 2006 ಆಗಿದೆ. ಆಕೆಗೆ ಮದುವೆಯ ವಯಸ್ಸಾಗಿಲ್ಲ ಎಂಬುದನ್ನು ಮಾಧ್ಯಮವೊಂದು ವರದಿ ಮಾಡಿದೆ. ಪಾಕ್ ಮಾಧ್ಯಮಗಳ ಪ್ರಕಾರ ನ್ಯಾಷನಲ್ ಆಸೆಂಬ್ಲಿ ಸದಸ್ಯ ಮೌಲಾನಾ ಸಲಾಹುದ್ದೀನ್ ಅಯುಬಿ ಅವರ ವಯಸ್ಸು 50ಕ್ಕೂ ಹೆಚ್ಚಾಗಿದೆ. ಈತ 14 ವರ್ಷದ ಬಾಲಕಿಯನ್ನು ವಿವಾಹವಾಗಿ ವಿಚಾರಣೆಗೆ ಒಳಪಟ್ಟಿದ್ದಾನೆ.
ಪಾಕಿಸ್ತಾನದ ಕಾನೂನು ಪ್ರಕಾರ 16 ವರ್ಷಕ್ಕಿಂತ ಕೆಳಗಿನ ಬಾಲಕಿಯರ ವಿವಾಹಕ್ಕೆ ಅವಕಾಶ ಇಲ್ಲ. ಹೀಗಾಗಿ ಇದು ಒತ್ತಾಯದ ಮದುವೆ ಎಂಬ ಅಭಿಪ್ರಾಯ ಇದೆ.
PublicNext
23/02/2021 10:55 pm