ಬೆಂಗಳೂರು: ವೈದ್ಯೆಯರು ಆಪರೇಷನ್ ಥಿಯೇಟರ್ ಗೆ ತೆರಳುವುದಕ್ಕೂ ಮುನ್ನ ಡ್ರೆಸ್ ಚೇಂಜ್ ಮಾಡುತ್ತಿದ್ದಾಗ ಖದ್ದು ರೆಕಾರ್ಡ್ ಮಾಡುತ್ತಿದ್ದ ನರ್ಸ್ ಬಾಯ್ ನನ್ನು ಬೆಂಗಳೂರಿನ ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಮಾರುತೇಶ್ (31) ಎಂದು ಗುರುತಿಸಲಾಗಿದ್ದು, ಸಂಜಯ್ ಗಾಂಧಿ ಇನ್ ಸ್ಟಿಟ್ಯೂಟ್ ಆಫ್ ಟ್ರಾಮಾ ಆ್ಯಂಡ್ ಆರ್ಥೋಪೆಡಿಕ್ಸ್ ನಿರ್ದೇಶಕರ ದೂರಿನ ಆಧಾರದ ಮೇರೆಗೆ ಪೊಲೀಸರು ಬಂಧಿಸಿದ್ದಾರೆ.
ಮಹಿಳಾ ಸರ್ಜನ್ ತಾವು ಆಪರೇಷನ್ ಥಿಯೇಟರ್ ಗೆ ತೆರಳುವುದಕ್ಕೂ ಮೊದಲು ಡ್ರೆಸ್ ಚೇಂಜ್ ಮಾಡುತ್ತಿದ್ದಾಗ ವೀಡಿಯೋ ಮಾಡಿರುವುದನ್ನು ತಿಳಿದಿದ್ದಾರೆ. ಈ ಬಗ್ಗೆ ವೈದ್ಯೆ ಇತರರಿಗೂ ತಿಳಿಸಿದ್ದು, ಕಾಂಟ್ರ್ಯಾಕ್ಟ್ ಆಧಾರ ಮೇಲೆ ಕೆಲಸ ಮಾಡುತ್ತಿರುವ ಉದ್ಯೋಗಿಯೊಬ್ಬರಿಗೆ ಮೊಬೈಲ್ ಸೇರಿದೆ ಎಂದು ತಿಳಿಸಿದ್ದಾರೆ. ಬಳಿಕ ವಿಷಯವನ್ನು ಸಂಸ್ಥೆಯ ನಿರ್ದೇಶಕರ ಗಮನಕ್ಕೆ ತಂದಿದ್ದು, ಅವರು ತಿಲಕ್ ನಗರ ಪೊಲೀಸ್ ಠಾಣೆಯನ್ನು ದೂರು ದಾಖಲಿಸಿದ್ದಾರೆ.
ಬಳಿಕ ಆರೋಪಿ ಮಾರುತೇಶ್ ನನ್ನು ಐಪಿಸಿ ಸೆಕ್ಷನ್ 354-ಸಿ ಹಾಗೂ 201 ಅಡಿ ಬಂಧಿಸಲಾಗಿದೆ. ಆರೋಪಿ ಕೆಲ ತಿಂಗಳಿಂದ ವೈದ್ಯೆಯರು ಡ್ರೆಸ್ ಬದಲಿಸುತ್ತಿದ್ದ ವಿಡಿಯೋಗಳನ್ನು ರೆಕಾರ್ಡ್ ಮಾಡುತ್ತಿದ್ದ. ಆದರೆ ಯಾವುದೇ ವೀಡಿಯೋಗಳನ್ನು ಯಾರೊಂದಿಗೂ ಹಂಚಿಕೊಂಡಿಲ್ಲ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
PublicNext
23/02/2021 03:49 pm