ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫೇಸ್​ಬುಕ್​ನಲ್ಲಿ ಪರಿಚಯ: ಮೋಸ ಹೋದ ಮೇಲೆ ಅಯೋಮಯ

ಚಿಕ್ಕಬಳ್ಳಾಪುರ: ಫೇಸ್​ಬುಕ್​ನಲ್ಲಿ ಪರಿಚಯವಾದ ಯುವಕನಿಂದ ಮಹಿಳೆ ವಂಚನೆಗೆ ಒಳಗಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಫೇಸ್​ಬುಕ್ ಮೂಲಕ ಪರಿಚಯವಾದ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ಇಡ್ಲಿಪಾಳ್ಯ ನಿವಾಸಿ ಸತೀಶ್, ಮಂಡ್ಯ ಮೂಲದ ವಿವಾಹಿತೆಗೆ ವಂಚನೆ ಮಾಡಿದ್ದಾನೆ ಎಂದು ಆರೋಪಿಸಿ ಮಹಿಳೆ ಚಿಂತಾಮಣಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.

ಫೇಸ್​ಬುಕ್​ನಲ್ಲಿ ಪರಿಚಯವಾದ ಸತೀಶ್ ಪ್ರೀತಿ, ಪ್ರೇಮ, ಕಾಮ ಎಂದು ವಿವಾಹಿತ ಮಹಿಳೆಯ ತಲೆ ಕೆಡಿಸಿದ್ದಾನೆ. ಮಹಿಳೆಯ ಅತ್ಯಾಚಾರದ ವಿಡಿಯೋವನ್ನು ಫೇಸ್​ಬುಕ್​ನಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ನೊಂದ ಮಹಿಳೆ ಆರೋಪಿಸಿದ್ದಾರೆ. ಮಹಿಳೆಯ ಸೈಟ್ ಹಾಗೂ ಮನೆ ಮಾರಿಸಿ 15 ಲಕ್ಷ ರೂಪಾಯಿ ಪಡೆದು ವಂಚನೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಸದ್ಯ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಸತೀಶ್ ಚಿಂತಾಮಣಿಯಲ್ಲಿ ಫೈನಾನ್ಸಿಯರ್ ಆಗಿದ್ದಾನೆ. ಹಾಗೂ ಮಹಿಳೆ ಬ್ಯೂಟಿ ಪಾರ್ಲರ್​ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

Edited By : Nagaraj Tulugeri
PublicNext

PublicNext

19/02/2021 01:38 pm

Cinque Terre

81.63 K

Cinque Terre

6