ಮೈಸೂರು: ಬೀದಿ ನಾಯಿಗೆ ಲೈಂಗಿಕ ಕಿರುಕುಳ ನೀಡಿದನೆಂಬ ಆರೋಪದ ಮೇಲೆ ಯುವಕನನ್ನು ನಗರದ ವಿ.ವಿ.ಪುರಂ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮೈಸೂರಿನ ಗೋಕುಲಂನ 2ನೇ ಹಂತದ ಎಂಸಿಸಿ ಕಾಲೊನಿಯ ಯುವಕ ಸೋಮಶೇಖರ್ ಎಂಬಾತನೇ ಬಂಧಿತ ಆರೋಪಿ. ಗೋಕುಲಂನ 3ನೇ ಹಂತದ ಗಣಪತಿ ದೇವಸ್ಥಾನದ ರಸ್ತೆ ಬಳಿ ಫೆ.11ರ ರಾತ್ರಿ ಆರೋಪಿ ಸೋಮಶೇಖರ್ ಹೆಣ್ಣು ನಾಯಿಯ ಮೇಲೆ ಅತ್ಯಾಚಾರ ಎಸಗುತ್ತಿದ್ದ ಪೈಶಾಚಿಕ ಕೃತ್ಯವನ್ನು ಸ್ಥಳೀರೊಬ್ಬರು ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದರು.
ಈ ದುಷ್ಕೃತ್ಯದ ವಿಡಿಯೊ ಎಲ್ಲೆಡೆ ವೈರಲ್ ಆಗಿತ್ತು. ಅದೇ ದೃಶ್ಯಗಳನ್ನು ಆಧರಿಸಿ ಪೀಪಲ್ ಫಾರ್ ಅನಿಮಲ್ಸ್ (ಪಿಎಫ್ಎ) ಸಂಸ್ಥೆಯ ಪ್ರಾಣಿ ಕ್ಷೇಮಾಭಿವೃದ್ಧಿ ಅಧಿಕಾರಿ ಕೆ.ಬಿ. ಹರೀಶ್ ವಿ.ವಿ.ಪುರಂ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಯುವಕನನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ.
PublicNext
16/02/2021 08:19 pm