ಸಂತ ಕಬೀರ್ ನಗರ: ಅನ್ಯಧರ್ಮೀಯನನ್ನು ಪ್ರೀತಿಸಿದ್ದ ಯುವತಿಯೊಬ್ಬಳನ್ನು ಕುಟುಂಬದವರೇ ಜೀವಂತ ಸುಟ್ಟಿಹಾಕಿರುವ ಘಟನೆ ಉತ್ತರ ಪ್ರದೇಶದಿಂದ ವರದಿಯಾಗಿದೆ.
ಫೆಬ್ರವರಿ 4 ರಂದು ಅರ್ಧ ಸುಟ್ಟಿಹೋದ ಯುವತಿಯೊಬ್ಬಳ ಶರೀರವು ಸಂತ ಕಬೀರ್ ನಗರ ಜಿಲ್ಲೆಯ ಜಿಗಿನ ಗ್ರಾಮದಲ್ಲಿ ಸಿಕ್ಕಿತ್ತು. ತನಿಖೆ ನಡೆಸಿದಾಗ ಮೃತಳು ಗೋರಖಪುರದ ಬೆಲಘಟದ ನಿವಾಸಿಯಾಗಿದ್ದ ರಂಜನ ಯಾದವ್ ಎಂಬುದು ತಿಳಿದುಬಂತು. ಮೃತ ಯುವತಿಯ ತಂದೆ ಕೈಲಾಶ್ ಯಾದವ್, ಸೋದರ ಅಜಿತ್ ಯಾದವ್, ಭಾವ ಸತ್ಯಪ್ರಕಾಶ ಯಾದವ್ ಮತ್ತು ಸೀತಾರಾಮ ಯಾದವ್ ಎಂಬುವರನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಸಂತ ಕಬೀರ್ ನಗರ ಎಸ್ಪಿ ಕೌಸ್ತುಭ್ ಹೇಳಿದ್ದಾರೆ.
ವಿಚಾರಣೆಯ ವೇಳೆ ಮೃತಳ ತಂದೆ ಕೈಲಾಶ್ ಯಾದವ್, ರಂಜನಾ ಮುಸ್ಲಿಂ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು. ಎಷ್ಟು ಹೇಳಿದರೂ ತನ್ನ ಪ್ರೇಮಿಯನ್ನು ಬಿಡಲು ಸಿದ್ಧವಿರಲಿಲ್ಲ. ಆ ಕಾರಣಕ್ಕೆ ಅವಳನ್ನು ಸಾಯಿಸಲು ಮಹುಲಿಯ ಕಾಂಟ್ರಾಕ್ಟ್ ಕಿಲ್ಲರ್ ಗೆ ಒಂದೂವರೆ ಲಕ್ಷ ರೂಪಾಯಿ ಸುಪಾರಿ ನೀಡಿದ್ದಾಗಿ ಒಪ್ಪಿಕೊಂಡಿದ್ದಾರೆ.
ರಂಜನಾಳವನ್ನು ನಿರ್ಜನ ಪ್ರದೇಶವೊಂದಕ್ಕೆ ಮೊಟರ್ಸೈಕಲ್ ನಲ್ಲಿ ಕರೆದೊಯ್ದ ಆರೋಪಿಗಳು, ಆಕೆಯ ಬಾಯಿ ಮತ್ತು ಕೈಗಳನ್ನು ಕಟ್ಟಿದ್ದಾರೆ. ಅವಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ ಎನ್ನಲಾಗಿದೆ. ಕಾಂಟ್ರಾಕ್ಟ್ ಕಿಲ್ಲರ್ ವರುಣ್ ತಿವಾರಿಯ ಪತ್ತೆ ಕಾರ್ಯ ಚುರುಕಾಗಿದೆ.
PublicNext
15/02/2021 06:53 pm